ರಾಹುಲ್ ಗಾಂಧಿ ಹುಟ್ಟುಹಬ್ಬ; ಕಾಪು ಯುವಕಾಂಗ್ರೆಸಿನಿಂದ ಪುಸ್ತಕ ವಿತರಣೆ

ರಾಹುಲ್ ಗಾಂಧಿ ಹುಟ್ಟುಹಬ್ಬ; ಕಾಪು ಯುವಕಾಂಗ್ರೆಸಿನಿಂದ ಪುಸ್ತಕ ವಿತರಣೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಶಿರ್ವದ ಗ್ರಾಮೀಣ ಭಾಗದಲ್ಲಿರುವ ಮುಟ್ಲಪಾಡಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ಸೋಮವಾರ ಆಚರಿಸಲಾಯಿತು.

ಕಾಪು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೇಲ್ವಿನ್ ಡಿಸೋಜಾರವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಗಳಾಗಿ ರೂಪುಗಳ್ಳುವಂತೆ ಕರೆನೀಡಿದರು.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್ ಮಾತನಾಡಿ ಯುವ ಕಾಂಗ್ರೆಸ್ ರಾಜ್ಯದಾದ್ಯಂತ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಇಗ್ನೇಷಿಯಸ್ ಡಿಸೋಜಾ ಮಾತನಾಡಿ ಗ್ರಾಮೀಣ ಭಾಗದ ಶಾಲೆಗೆ ಇನ್ನು ಮುಂದಕ್ಕೆ ಕೂಡ ಈ ರೀತಿಯ ನೆರವು ಯುವ ಕಾಂಗ್ರೆಸಿನಿಂದ ಲಭಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅರುಣ್ ಪೂಜಾರಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧಿರ್ ಶೆಟ್ಟಿ, ಕಾಂಗ್ರೆಸ್ ನಾಯಕರುಗಳಾದ ಸಂತೋಷ್ ಬಂಗೇರ, ಮಹಮ್ಮದ್ ಹಮ್ರಾಜ್, ತನುಜ್ ಕರ್ಕೇರಾ, ಶೈನಿತ್ ಬ್ರಿಟ್ಟೊ, ಸಂತೋಶ್ ಫೆರ್ನಾಂಡಿಸ್, ಅಶ್ಫಾಕ್ ಅಹ್ಮದ್, ಜಾಹಿದ್ ಹಸನ್ ಇತರರು ಭಾಗವಹಿಸಿದ್ದರು. ಸುನಿಲ್ ಕಾಬ್ರಾಲ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸುಲೋಚನ ವಂದಿಸಿದರು.

Leave a Reply

Please enter your comment!
Please enter your name here