ವಿನಾಯಕ ಬಾಳಿಗ ಕೊಲೆ ; ಪ್ರಮುಖ ಆರೋಪಿ ನರೇಶ್ ಶೆಣೈ ಬಂಧನ

ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ನನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೋಲಿಸ್ ಕಮೀಷನರ್ ಚಂದ್ರ ಶೇಖರ್ ಅವರು ಮಾರ್ಚ್ 21 ರಿಂದು ಮಂಗಳೂರು ನಗರದ ಕೊಡಿಯಾಲ್ ಬೈಲು ಬೆಸೆಂಟ್ ಸ್ಕೂಲ್ 2 ನೇರ ಲೇನ್ ಸ್ಟರ್ಲಿಂಗ್ ಚೇಂಬರ್ ಹಿಂಬದಿಯ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಪಿ ಬಾಳಿಗ ಎಂಬವರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ನಡೆಸಿದ್ದರು.

naresh-shenoy-01042016

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ  ಮಂಗಳೂರಿನ ವಿಟಿ ರಸ್ತೆಯಲ್ಲಿ ವಿವೇಕ್ ಟ್ರೇಡರ್ಸ್ ಎಂಬ ಆಯುರ್ವೇದಿಕ್ ಔಷದ ವಿತರಣ ಸಂಸ್ಥೆಯನ್ನು ನಡೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ, ವಿನಾಯಕ ಬಾಳಿಗಾನ ಹತ್ಯೆ ನಡೆಸುವ ಬಗ್ಗೆ ಇತರ ಆರೋಪಿಗಳೊಂದಿಗೆ ಸಂಚು ನಡೆಸಿದ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಕೃತ್ಯ ನಡೆಸಿದ ಆರೋಪಿಗಳಿಗೆ ಹಣ ನೀಡಿದ್ದು, ಬಳಿಕ ತಲೆ ಮರೆಸಿಕೊಂಡಿದ್ದು, ಸಾಕ್ಷ್ಯ ನಾಶಗೊಳಿಸಿರುವುದು ತನಿಖೆಯ ಸಮಯದಲ್ಲಿ ಕಂಡುಬಂದಿದೆ.

ಪ್ರಕರಣದ ತನಿಖೆಯ ಸಮಯ ಪ್ರಕರಣಕ್ಕೆ ಸಂಬಂಧ ತಲೆ ಮರೆಸಿಕೊಂಡಿದ್ದ ನರೇಶ್ ಶೆಣೈನನ್ನು ಜೂನ್ 26 ರಂದು ಹೆಜಮಾಡಿ ಬಳಿ ಮಂಗಳೂರು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜಾ ನೇತೃತ್ವದ ತಂಡ ಬಂಧಿಸಿದ್ದು, ಪ್ರಕರಣದ ತನಿಖೆ ಕಾರ್ಯ ಮುಂದುವರೆದಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ, ಶಿವಪ್ರಸಾದ್, ಶೈಲೆಶ್, ಮಂಜುನಾಥ ಶೆಣೈ, ಶ್ರೀಕಾಂತ್ ಎಂಬವರನ್ನು ಈಗಾಗಲೇ ಪತ್ತೆ ಮಾಡಿ ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ತನಿಖೆ ನಡೆಸಿದಾಗ ಸೂಕ್ತ  ಸಾಕ್ಷಾಧಾರಗಳ ಮೂಲಕ ಆರೋಪಿಗಳಾದ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಹಾಗೂ ಮಂಜುನಾಥ ಶೆಣೈ ಎಂಬವರ ವಿರುದ್ದ ಜೂನ್ 23 ರಂದು ಜೆಎಂ ಎಫ್ ಸಿ 3 ನೇ ನ್ಯಾಯಾಲಯಕ್ಕೆ 770 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಪೋಲಿಸರು ಸಲ್ಲಿಸಿದ್ದರು.

ವಿನಾಯಕ ಬಾಳಿಗ ಪ್ರಕರಣ ಪೋಲಿಸರಿಗೆ ದೊಡ್ಡ ತಲೆನೋವಿನ ಪ್ರಕರಣವಾಗಿದ್ದು, ಕೊನೆಗೂ ಪ್ರಮುಖ ಆರೋಪಿಯಾದ ನರೇಶ್ ಶೆಣೈ ನನ್ನು ಬಂಧೀಸುವಲ್ಲಿ ಯಶಸ್ವಿಯಾಗಿದ್ದಾರೆ

Leave a Reply