ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿ ವಿಲಾಸ್ ನಾಯಕ್ ನಿಯುಕ್ತಿ

ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿ ವಿಲಾಸ್ ನಾಯಕ್ ನಿಯುಕ್ತಿ

ಉಡುಪಿ : ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿದ್ದ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರ ತೆರವಾದ ಸ್ಥಾನಕ್ಕೆ ಉಡುಪಿ ಪಾಂಗಾಳ ವಿಲಾಸ್ ನಾಯಕ್ ಇವರನ್ನು ಮುಂದಿನ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿ ನಿಯುಕ್ತಿ ಮಾಡಲಾಯಿತು.

vilas-nayak-vhp-presdient vilas-nayak-vhp-presdient-00

ಇವತ್ತು ನಡೆದ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಜಿಲ್ಲಾ ಬೈಠಕ್‍ನಲ್ಲಿ ಈ ನಿರ್ಣಯವನ್ನು ಕೈಗೊಂಡು, ವಿಶ್ವ ಹಿಂದೂ ಪರಿಷದ್‍ನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊಫೆಸರ್ ಎಂ.ಬಿ ಪುರಾಣಿಕ್ ನೂತನ ಜವಾಬ್ದಾರಿಯನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಾದರ್ಶಿ ಕೃಷ್ಣಮೂರ್ತಿ, ಪ್ರಾಂತ ಬಜರಂಗದಳದ ಸಂಚಾಲಕ ಶರಣ್ ಪಂಪ್‍ವೆಲ್, ವಿಭಾಗ ಸಹಸಂಚಾಲಕ ಸುನಿಲ್. ಕೆ.ಆರ್, ಜಿಲ್ಲಾ ಕಾರ್ಯದರ್ಶಿ ರತ್ನಾಕರ್ ಅಮೀನ್, ಬಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಮತ್ತು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here