‘ಶಾಲಾ ವಿದ್ಯಾರ್ಥಿಗಳ ವಾಹನ ಸುರಕ್ಷತೆ’ ಆಕಾಶವಾಣಿ ನೇರಪೋನ್ ಇನ್

‘ಶಾಲಾ ವಿದ್ಯಾರ್ಥಿಗಳ ವಾಹನ ಸುರಕ್ಷತೆ’ ಆಕಾಶವಾಣಿ ನೇರಪೋನ್ ಇನ್ 

ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರವು ಜುಲೈ 6ರಂದು ಬುಧವಾರ ಬೆಳಿಗ್ಗೆ 8.50ರಿಂದ 10ಗಂಟೆಯ ವರೆಗೆ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ‘ಶಾಲಾ ವಿದ್ಯಾರ್ಥಿಗಳ ವಾಹನ ಸುರಕ್ಷತೆ’ ಕುರಿತಾಗಿ ನೇರಪೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ.

ಶಾಲಾಮಕ್ಕಳ ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಉಪಕ್ರಮಗಳ ಬಗ್ಗೆ ಕೇಳುಗರ ಪ್ರಶ್ನೆಗಳಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಶ್ರೀ ವಿಷ್ಣುವರ್ಧನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾರಿಗೆ ಅಧಿಕಾರಿ (ಪ್ರಭಾರಿ) ಶ್ರೀ.ಜಿ.ಎಸ್.ಹೆಗಡೆ ಉತ್ತರಿಸಲಿದ್ದಾರೆ. ಕೇಳುಗರು ಸಂಪರ್ಕಿಸಲು ಕರೆ ಮಾಡಬೇಕಾದ ದೂರವಾಣಿ ಸಂಖೈಗಳು 2211999(ಎಸ್‍ಟಿಡಿ ಸಂಖೈ 0824) ಮೊಬೈಲಿ ಸಂಖೈ 8277038000 ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ನಡಿಸಿಕೊಡಲಿದ್ದಾರೆ.

ಎಲ್ಲಾ ಶಾಲೆಗಳ ಮುಖ್ಯಸ್ಥರು, ಶಾಲಾ ಸಮಿತಿಗಳು ಹಾಗೂ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವಂತಹ ಖಾಸಗಿ ವಾಹನಗಳ (ಒಪ್ಪಂದದ ಮೇರೆಗೆ) ಪ್ರವರ್ತಕರು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಪೂರ್ಣ ಮಾಹಿತಿ ಹಾಗೂ ನಿಮ್ಮ ಸಂದೇಹಗಳನ್ನು ಪರಿಹರಿಸಲು ಪ್ರಶ್ನೆಗಳನ್ನು ಕೇಳಬಹುದು. ಪಾಲಕರು, ಹೆತ್ತವರು, ಕ್ಯಾಬ್ ಮಾಲಕರ ಸಂಘªದವರು ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು.
ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಸಂತಕುಮಾರ್ ಪೆರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply