ಸಿದ್ದಿವಿನಾಯಕ ಪ್ರತಿಷ್ಠಾನದಿಂದ ಪ್ರಾಮಾಣಿಕ ರಿಕ್ಷಾ ಚಾಲಕನಿಗೆ ಸನ್ಮಾನ

ಸಿದ್ದಿವಿನಾಯಕ ಪ್ರತಿಷ್ಠಾನದಿಂದ ಪ್ರಾಮಾಣಿಕ ರಿಕ್ಷಾ ಚಾಲಕನಿಗೆ ಸನ್ಮಾನ

ಮಂಗಳೂರು: ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ ವಾರಸುದಾರರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿದ ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಅವರನ್ನು ಸಿದ್ದಿವಿನಾಯಕ ಪ್ರತಿಷ್ಠಾನ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ಕ್ರೀಡಾಕೂಟದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

auto (1)

ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್‍ಕುಮಾರ್ ರೈ ಮಾಲಾಡಿ ಅವರು ರಿಕ್ಷಾ ಚಾಲಕನ ಪ್ರಮಾಣಿಕತೆಯನ್ನು ಗೌರವಿಸಿ ಸನ್ಮಾನಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳಾೈರ್‍ಗುತ್ತು, ಪ್ರತಿಭಾನ್ವೇಷಣೆ ಸಮಿತಿಯ ಸಂಚಾಲಕಿ ಡಾ.ಆಶಾಜ್ಯೋತಿ ರೈ, ಉಮೇಶ್ ರೈ, ಸತೀಶ್ ಶೆಟ್ಟಿ ಕೊಡಿಯಾಲ್‍ಬೈಲ್ ಉಪಸ್ಥಿತರಿದ್ದರು.

Leave a Reply