ಸಿಬಿಐ ಎದುರು ತಂದ ಸಾಕ್ಷಿದಾರ ಬೋಗಸ್ ಹಾಗೂ ಭ್ರಷ್ಟಾಚಾರಿ ! – ಸನಾತನ ಸಂಸ್ಥೆ

Spread the love

ಮುಂಬೈ : ಸಿಬಿಐ ವತಿಯಿಂದ ಡಾ.ತಾವಡೆಯ ವಿರುದ್ಧ ಸಾಕ್ಷಿದಾರರೆಂದು ಸದ್ಯ ಕೆಲವು ಮಾಧ್ಯಮಗಳು ತರಾತುರಿಯಿಂದ ಸಂಜಯ ಸಾಡವಿಲಕರ್‌ನನ್ನು ತೋರಿಸುತ್ತಿವೆ. ಈ ವ್ಯಕ್ತಿ ಚಾರಿತ್ರ್ಯದ ಬಗ್ಗೆ ಪೂರ್ಣ ಕೊಲ್ಹಾಪುರದವರಿಗೆ ಮಾಹಿತಿ ಇದ್ದು, ಆತನ ಕುಕೃತ್ಯಗಳು ಪೊಲೀಸ್ ಠಾಣೆಯಲ್ಲಿಯೂ ದಾಖಲಾಗಿವೆ. ಇಂತಹ ವ್ಯಕ್ತಿಯ ಸಾಕ್ಷಿಯ ಆಧಾರದಲ್ಲಿ ಒಬ್ಬ ನಿರಪರಾಧಿ ವ್ಯಕ್ತಿಯನ್ನು ಸಿಲುಕಿಸುವ ಪ್ರಯತ್ನವು ಭವಿಷ್ಯದಲ್ಲಿ ಸಿಬಿಐ ಮತ್ತು ಭಾಜಪ ಸರಕಾರದ ಹೆಸರಿಗೆ ಕಳಂಕ ತರುವಂತಿದೆ. ಸಾಡವಿಲಕರ್ ಈ ವ್ಯಕ್ತಿಯು ಸ್ವತಃ ಭ್ರಷ್ಟನಾಗಿದ್ದು ಅವನು ಕೊಲ್ಹಾಪುರದ ಶ್ರದ್ಧಾಸ್ಥಾನವಾಗಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬೆಳ್ಳಿಯ ರಥದ ಗುತ್ತಿಗೆಯಲ್ಲಿ ಬೆಳ್ಳಿ ಅಪಹರಿಸಿದ್ದಾನೆ ಎಂಬ ಆರೋಪ ಆತನ ಮೇಲಿದೆ. ಈ ಬೆಳ್ಳಿ ರಥದ ಪ್ರಕರಣದಲ್ಲಿ ಅವ್ಯವಹಾರವಾಗಿದ್ದ ವರದಿಯನ್ನು ಅಂದಿನ ಜಿಲ್ಲಾಧಿಕಾರಿಯವರೇ 2012 ರಲ್ಲಿ ನೀಡಿದ್ದರು. ಆದರೆ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಇವರ ಕೃಪಾಛತ್ರದಲ್ಲಿ ಈ ಅವ್ಯವಹಾರವಾಗಿದ್ದು 2012 ರ ನಂತರವೂ ಅವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.

ಹಿಂದೂ ವಿಧಿಜ್ಞ ಪರಿಷತ್ತು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಹಿತ ಇತರ ದೇವಸ್ಥಾನಗಳ ಭೂಮಿ, ಗಣಿಗಾರಿಕೆ, ಬೆಲೆಬಾಳುವ ಆಭರಣಗಳು ಹೀಗೆ ಎಷ್ಟೋ ಹಗರಣಗಳನ್ನು ಹೊರತೆಗೆದಿದೆ. ಅದರಲ್ಲಿ ಈ ಬೆಳ್ಳಿಯ ರಥದ ವಿಷಯವೂ ಇತ್ತು. ಈ ಹಗರಣವನ್ನು ಹೊರಗೆಡಹಿದ ನಂತರ ಆ ಬಗ್ಗೆ ಸಿಐಡಿ ತನಿಖೆಗಾಗಿ ದೊಡ್ಡ ಆಂದೋಲನ ಮಾಡಲು ಸನಾತನ ಸಂಸ್ಥೆಯು ಸಹಾಯ ಮಾಡಿತ್ತು. ಹಾಗಾಗಿ ‘ಸನಾತನ ಸಂಸ್ಥೆಯಿಂದಾಗಿ ತಮ್ಮ ಈ ಅಕ್ರಮ ಆದಾಯ ನಿಲ್ಲುವುದು ಮತ್ತು ತಾವು ಜೈಲಿಗೆ ಹೋಗಬೇಕಾಗಬಹುದು’, ಎಂದು ಅನೇಕರಿಗೆ ಭಯವಾಗುತ್ತಿದೆ. ಈ ಭಯದಿಂದಲೇ ಈ ರೀತಿ ಆರೋಪಗಳಾಗುತ್ತಿವೆ. ಸಂಜಯ ಸಾಡವಿಲಕರ್ ಈತನೇ ರಥಕ್ಕೆ ಬೆಳ್ಳಿ ಕೂರಿಸಿದ್ದನು. ಅದರ ಅವ್ಯವಹಾರದ ಬಗ್ಗೆ ತನ್ನ ವಿಚಾರಣೆಯಾಗಬಹುದು ಎಂಬ ಭಯ ಆತನಿಗಿತ್ತು. ಹಾಗಾಗಿ ಸಂಸ್ಥೆಯ ಮಾನಹಾನಿ ಮಾಡುವುದು ಮತ್ತು ಅದು ಸಾಧ್ಯವಾಗದಿದ್ದರೆ ಕಡಿಮೆಪಕ್ಷ ದೇವಸ್ಥಾನದ ಹಗರಣದಿಂದ ಜನರ ಗಮನವನ್ನು ವಿಚಲಿತಗೊಳಿಸುವುದು, ಇದು ಆತನ ಸಂಚಾಗಿತ್ತು, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಗಳಾದ ನ್ಯಾಯವಾದಿ ಸಂಜೀವ ಪುನಾಳೆಕರ್ ಇವರು ಇಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ದೇವಸ್ಥಾನದ ಹಗರಣ ಹೊರಗೆಡಹಿದ್ದರಿಂದ ನಾಳೆ ಜೈಲಿಗೆ ಹೋಗಬೇಕಾಗಬಹುದೆಂದು ದೊಡ್ಡ ದೊಡ್ಡ ಕುಳಗಳು ಅಸ್ವಸ್ಥರಾಗಿವೆ. ಈ ಭ್ರಷ್ಟಾಚಾರದ ಪ್ರಕರಣದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಬೆಳ್ಳಿ ರಥದ ಗುತ್ತಿಗೆಯನ್ನು ಸಂಜಯ ಸಾಡವಿಲಕರ್ ಟೆಂಡರ್ ಕರೆಯದೇ 2012 ರಲ್ಲಿಯೇ ವಹಿಸಲಾಗಿತ್ತು, ಅದರ ಶುದ್ಧತೆ ಎಷ್ಟಿರಬೇಕೆಂದು ಮೊದಲೇ ನಿರ್ಧರಿಸಿರಲಿಲ್ಲ. 286 ಕಿಲೋ ಬೆಳ್ಳಿ ನೀಡಲಾಯಿತು; ಆದರೆ ಈ ಬೆಳ್ಳಿ ಎಷ್ಟು ಶುದ್ಧವಿತ್ತು ಮತ್ತು ಸಾಡವಿಲಕರರಿಂದ ದೊರೆತ ಬೆಳ್ಳಿ ಎಷ್ಟು ಶುದ್ಧವಾಗಿದೆ, ಇದರ ತನಿಖೆ ಆಗಿಲ್ಲ, ಇಂತಹ ಅನೇಕ ವಿಷಯಗಳನ್ನು ಸಂಜೀವ ಪುನಾಳೆಕರ್ ಇವರು ದಾಖಲೆ ಸಹಿತ ಪ್ರಸ್ತುತ ಪಡಿಸಿದರು.

Press Conf-Sanatan

ಡಾ. ತಾವಡೆ ಹಿಂದೆ ಕೊಲ್ಹಾಪುರದಲ್ಲಿವಾಸಿಸುತ್ತಿದ್ದರು, ಈ ಕಾರಣದಿಂದ ಕೇವಲ ಪರಿಚಯದವರೆಂಬ ಲಾಭ ಪಡೆಯುತ್ತಾ ಮನಬಂದಂತೆ ಆರೋಪಿಸುತ್ತಿದ್ದಾರೆ. ಈತ ಬಾಡಿಗೆ ಸಾಕ್ಷಿಯಾಗಿದ್ದಾನೆ, ಎಂದು ಶ್ರೀ. ಅಭಯ ವರ್ತಕ್ ಇವರು ಆರೋಪಿಸಿದರು. ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯ ಹೆಚ್ಚುತ್ತಿರುವ ಪ್ರಭಾವವು ಸಹಿಸದ್ದರಿಂದ ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಆಯೋಜಿಸಿದ ಆಂದೋಲನದಲ್ಲಿ ಸಂಜಯ ಸಾಡವಿಲಕರ್ ಮತ್ತು ಆತನ ಸಹಚರರು ಕೋಲಾಹಲವೆಬ್ಬಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಶ್ರೀ.ಶಿವಾನಂದ ಸ್ವಾಮಿ ಮೇಲೆ ದಾಳಿ ನಡೆಸುವುದಾಗಿ ದೂರವಾಣಿಯಲ್ಲಿ ಬೆದರಿಕೆ ಹಾಕಲಾಗಿತ್ತು. ಆಗ ಸ್ವಾಮಿಯವರು ಪೊಲೀಸರಲ್ಲಿ ದೂರನ್ನೂ ದಾಖಲಿಸಿದ್ದರು. ಆ ದೂರನ್ನೂ ಇಂದು ಅಭಯ ವರ್ತಕ್‌ರು ಪತ್ರಕರ್ತರೆದುರು ತೋರಿಸಿದರು. ಸಂಜಯ ಸಾಡವಿಲಕರ್ ಮತ್ತು ಆತನ ಸಹಚರರು ಮೊದಲಿನಿಂದಲೇ ಸಂಸ್ಥೆ ಮೇಲೆ ಸಿಟ್ಟಿಗೆದ್ದಿದ್ದರು. ಹಾಗಾಗಿ ಈ ಸಾಕ್ಷಿಯನ್ನು ಸೇಡಿನಭಾವನೆಯಿಂದ ನೀಡಲಾಗಿದೆ.

ಇಂತಹ ಅಪರಾಧಿವೃತ್ತಿಯ ಹಗರಣಕೋರ ವ್ಯಕ್ತಿಗೆ ಹಣ ಕೊಟ್ಟು ಈ ಸಾಕ್ಷಿಯನ್ನು ಖರೀದಿಸಲಾಯಿತು. ಏಕೆಂದರೆ ಸಾಕ್ಷಿದಾರ, ತನಿಖೆಯ ಕಾಗದಪತ್ರ, ಇವೆಲ್ಲವನ್ನು ನಾನು ಮೊದಲೇ ನೋಡಿದ್ದೇನೆ, ಎಂದು ಆಶಿಷ ಖೇತಾನ್ ಸ್ಪಷ್ಟವಾಗಿ (ವಾಹಿನಿಯಲ್ಲಿ ಎಲ್ಲರೆದುರು) ಹೇಳಿದ್ದರು. ಸಿಬಿಐ ಜೊತೆ ಕೆಲಸ ಮಾಡುವ ರಾಜ್ಯದ ಪೊಲೀಸ್ ಉಪಾಯುಕ್ತ ಶ್ರೇಣಿಯ ಅಧಿಕಾರಿಗಳಿಗೂ ಸಿ.ಬಿ.ಐ. ತನಿಖೆಯ ಮಾಹಿತಿ ನೀಡುವುದಿಲ್ಲ. ಅವರೊಂದಿಗೆ ಕೆಲಸದವರಂತೆ ವ್ಯವಹರಿಸುತ್ತಾರೆ; ಆದರೆ ಆಶಿಷ ಖೇತಾನಗೆ ಇದೆಲ್ಲ ಮೊದಲೇ ತಿಳಿಯುತ್ತದೆ ಇದರ ಅರ್ಥ ಇಂದು ಆಶಿಷ ಖೇತಾನ ಇವನೇ ಸಿ.ಬಿ.ಐ.ನ ಬಾಸ್ ಆಗಿದ್ದಾನೆ ಮತ್ತು ಗೃಹ ಸಚಿವ ರಾಜನಾಥ ಸಿಂಗ್‌ರನ್ನು ಕತ್ತಲೆಯಲ್ಲಿಟ್ಟು ಸಿ.ಬಿ.ಐ. ಈ ಪೂರ್ಣ ಸಂಚನ್ನು ರೂಪಿಸುತ್ತಿದೆ ಎಂದು ಶ್ರೀ. ಪುನಾಳೆಕರ ಇವರು ಆರೋಪಿಸಿದರು.


Spread the love