ಹಸಿವನ್ನು ನೀಗಿಸುವ ಹಲಸು!

ಹಸಿವನ್ನು ನೀಗಿಸುವ ಹಲಸು!

ಪಾಟೀಲ ರವೀಂದ್ರ ಸಂಗಣಗೌಡ ಮತ್ತು ಡಾ. ಶಿವಕುಮಾರ್ ಮಗದ

ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮ, ಆತ್ಮ ಯೋಜನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಕೃಷಿಕ್ ಸಮಾಜ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಬ್ಬ-2016 ಪಿಲಿಕುಳದಲ್ಲಿ ಜುಲೈ 16 ಮತ್ತು 17 ರಂದು ಅಯೋಜಿಸಿರುವ ಪ್ರಯುಕ್ತ ಹಲಸಿನ ಬಗ್ಗೆ ಒಂದಷ್ಟು ಮಾಹಿತಿ.

image010halasu-habba-presmmet-20160714-010 image009halasu-habba-presmmet-20160714-009 image011halasu-habba-presmmet-20160714-011 image008halasu-habba-presmmet-20160714-008 image007halasu-habba-presmmet-20160714-007

ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ನಿಜವಾಗಿ ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ ಹೀಗೆ ಒಂದಲ್ಲ ಒಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ. ಇತ್ತೀಚನ ವರ್ಷಗಳಲ್ಲಿ ಹಲಸಿನ ಹಣ್ಣಿಗೆ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಹಸಿವಿನಿಂದ ತತ್ತರಿಸುತ್ತಿರುವ ಬಡದೇಶಗಳಲ್ಲಿ ಹಲಸು ಬಡವರ ಕಲ್ಪವ್ರೃಕ್ಷ. ಹಲಸಿಕಾಯಿ ತೊಳೆಯ ಖಾದ್ಯ ಉಪಾಹಾರಕ್ಕಾಗುತ್ತದೆ. ಮದ್ಯಾಹ್ನದ ಉಟಕ್ಕೂ ಸೈ. ಇದನ್ನೇ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ದುಡಿವ ಜೀವಗಳು ನಮ್ಮ ಮಧ್ಯೆ ಇದ್ದಾರೆ. ಇಷ್ಟಾದರೂ, ಇಂದು ಹಲಸು ನಿರ್ಲಕ್ಷಿತ ಹಣ್ಣು. ಹಿತ್ತಲಲ್ಲಿ, ತೋಟಗಳಲ್ಲಿ ಕೊಳೆತು ನಾರಿ ಮಣ್ಣಾಗಿ ಹೋದೀತೇ ವಿನಾ: ಅದು ಅಂಗಳಕ್ಕೆ ಬರುವುದಿಲ್ಲ.

* ಹಳ್ಳಿಯ ಮೂಲೆ ಮೂಲೆಗಳಿಂದ ಎಳೆ ಹಲಸು, ಹಲಸಿನ ಹಣ್ಣನ್ನು ಎಚ್ಚರದಿಂದ ಕೊಯ್ದು ತಂದು ಸಂಗ್ರಹಿಸಿ ಪೂರೈಸುವ ಹಾಲಿನ ಸಂಘದ ತರಹದ ಸಂಗ್ರಹಣಾ ಕೇಂದ್ರಗಳನ್ನು ಸರಕಾರ ರೂಪಿಸಬೇಕು.
* ಹಲಸಿನಹಣ್ಣಿನ ಸಿಪ್ಪೆ ಕೆತ್ತಲು ತುಂಡು ಮಾಡಲು, ಕೊಚ್ಚಲು ಉಪಕರಣಗಳನ್ನು ಅಭಿವೃದ್ಧಿಪಡಿಸಬೇಕು.
* ಹಲಸಿನ ಹಣ್ಣಿನ ಪಲ್ಪ್ ಮಾಡುವ ವಿಧಾನವನ್ನು ಹಳ್ಳಿಗಳ ರೈತರಿಗೂ ಕಲಿಸಬೇಕು.
* ತಾಜಾ ಹಲಸಿನಹಣ್ಣಿನ ತೊಳೆಗಳನ್ನು ಹಾಳಾಗದಂತೆ ಸಾಗಾಟ ಮಾಡಿ ಮಾರಲು ಅನುಕೂಲವಾಗುವಂತೆ ಹದಿನೈದು ದಿನ ತಾಜಾ ಆಗಿಯೇ ಉಳಿಸುವಂಥ ಕನಿಷ್ಠ ಸಂಸ್ಕರಣೆ ವಿಧಾನವನ್ನು ಸಮಾರೋಪಾವದಿಯಲ್ಲಿ ಅಭಿವೃದ್ದಿಗೊಳಿಸಬೇಕು.
* ರೆಡಿಟು ಕುಕ್ ಎಳೆ ಹಲಸು/ಹಲಸು ತಯಾರಿಯ ವಿದ್ಯೆಯನ್ನು ದೊಡ್ಡ ರೀತಿಯಲ್ಲಿ ಹಲಸು ಬೆಳೆಸುವ ಕೇಂದ್ರಗಳಲ್ಲಿ ಹಬ್ಬಿಸಬೇಕು.
* ಹಲಸಿನ ಕಸಿ ವೃತ್ತಿಯಲ್ಲಿ ಹೆಚ್ಚುಹಚ್ಚು ಜನ ತೊಡಗುವಂತೆ ಪ್ರೇರೇಪಿಸಿ, ತರಬೇತಿಕೊಟ್ಟು ನಮ್ಮ ಅತ್ಯುತ್ತಮ ತಳಿಗಳನ್ನು ಉಳಿಸಿ ಬೆಳೆಸಬೇಕು.
ಸಾಧ್ಯತೆಗಳನ್ನು ಮೀರಿ ಬೆಳೆದ ಸಾಮಥ್ರ್ಯ ಹಲಸಿಗಿದೆ. ಒಂದೆಡೆ ಹಲಸೆಂದರೆ ಹೊಲಸೆನ್ನುವ ವರ್ಗ. ಮತ್ತೊಂದೆಡೆ ಅದರ ತೊಟ್ಟನ್ನು ಬಿಟ್ಟು ಉಳಿದೆಲ್ಲಾ ಭಾಗಗಳನ್ನು ಮೌಲ್ಯವರ್ಧಿಸುವ ಹಲಸು ಪ್ರಿಯರು. ನಮಗೆ ಹಲಸಿನ ಬಗ್ಗೆ ಪೂರ್ವಾಗ್ರಹವಿದೆ. ಅಷ್ಟೇನು ಆರೋಗ್ಯಕ್ಕೆ ಅನುಕೂಲವಿಲ್ಲದ ಕಿವಿ ರಾಂಬುಟನ್ ತಿನ್ನುವ ಯುವಜನತೆ, ಅನಗತ್ಯ ಕೀಳರಿಮೆ ಬಿಟ್ಟು ನಮ್ಮ ದೇಶದ ಹಣ್ಣನ್ನು ತಿನ್ನುವ ಹವ್ಯಾಸ ಬೆಳೆಸಿಕೊಂಡರೆ, ನಮ್ಮ ರೈತರ ಬದುಕು ಹಸನಾಗಲು ಸಹಕಾರಿಯಾಗುತ್ತದೆ.
ಪರಿಸ್ಥಿತಿ ಬದಲಾಗಿತ್ತಿದೆ…ಒಳ್ಳೆಯ ದಿನಗಳು ಬರುತ್ತಿವೆ
ಇಂದು ಹಲಸನ್ನು ಲಾಭದಾಯಕ ಬೆಳೆಯಾಗಿ ನೋಡುವ ಕಾಲ ಬಂದಿದೆ. ಹಲಸಿನ ಹಣ್ಣು ಹಾಗೂ ಇತರ ಉತ್ಪನ್ನಗಳಿಗೆ ಬೇಡಿಕೆ ಹೇಚ್ಚುತ್ತಿದೆ. ಇದು ಮಹಿಳೆಯರ ಆರ್ಥಿಕ ಶಕ್ತಿಯ ಮೂಲವಾಗಿದೆ. ಹಲಸಿನ ಕಾಯಿ ಹಪ್ಪಳ ಮಾಡುವಲ್ಲಿ ಮಹಿಳೆಯರು ಮಂಚೂಣಿಯಲ್ಲಿದ್ದಾರೆ. ಹಲಸಿನ ಚಿಪ್ಸ್‍ಗೆ ಎಲ್ಲಡೆ ಭಾರೀ ಬೆಡಿಕೆ ಬಂದಿದೆ. ಕೆ.ಜಿ ಗೆ 140 ರಿಂದ 160 ರೂ ವರೆಗೆ ಬೆಲೆ ಇದ್ದರೂ ಕೊಳ್ಳುವವರು ಹೆಚ್ಚು ಮಂದಿ ಇದ್ದಾರೆ. ಹಲಸಿನ ಕಾಯಿ ಚಿಪ್ಸ್‍ಗೆ ಬಳಕೆಯಾದರೆ, ಹಣ್ಣುಗಳನ್ನು ಜಾಮ್, ಹಣ್ಣಿನ ಹಪ್ಪಳ, ಕಡುಬು, ಹೋಳಿಗೆ, ಬನ್ಸ್, ಜಾಫಿ, ಪಾಯಸ ಹೀಗೆ ಹಲವು ಖಾದ್ಯಗಳ ತಯಾರಿಕೆಯಲ್ಲಿ ಬಳಸಬಹುದು ಎಂಬುದು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದ್ದರಿಂದ ಹಲಸು ಕೃಷಿ ಮತ್ತು ಹಲಸಿನ ಉತ್ಪನ್ನಗಳ ಬಗ್ಗೆ ಜನರಿಗೆ ಹರಿವು ಮೂಡಿಸಲು ಈ ಹಲಸು ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.
ಹಲಸನ್ನು ಈಗ ಉಪೇಕ್ಷಿಸುಂವತಿಲ್ಲ. ಈಗ ಎಲ್ಲೆಲ್ಲೂ ಹಲಸಿನ ಹಣ್ಣಿನದೇ ದರ್ಬಾರು. ಹಿತ್ತಲಿನಲ್ಲಿ ತೋಟದ ಬದುಗಳಲ್ಲಿ ಬಿದ್ದು ಕೊಳೆಯುತಿದ್ದ ಹಣ್ಣುಗಳಿಗೆ ಬೆಲೆ ಬಂದಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳ ಜನರು ಹಲಸಿನ ಹಣ್ಣು ಇತರ ಉತ್ಪನ್ನಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಭವಿಷ್ಯದ ದಿನಗಳಲ್ಲಿಹಲಸಿಗೆ ಇನೂ ಹೆಚ್ಚಿನ ಬೇಡಿಕೆ ಬರಬಹುದು. ಜತೆಗೆ ಜೂಸ್, ಬೀಜದ ಪುಡಿಯಿಂದ ಬಿಸ್ಕತ್, ಕಪ್ ಕೇಕ್ ಹಪ್ಪಳ, ಚಿಪ್ಸ್, ಬೆರಟ್ಟಿ, ಉಂಡುಕ, ಬೀಜದ ಸಾಂತಾಣ (ಬೇಯಿಸಿ ಬಿಸಿಲಿನಲ್ಲಿ ಒಣಗಿಸಿದ) ಇವುಗಳ ಜೊತೆಯಲ್ಲಿ ಹಲಸು ವಿವಿಧ ಅವತಾರಗಳನ್ನು ತಾಳಿದೆ. ಜಾಮ್, ಹಪ್ಪಳ, ಜ್ಯೂಸ್, ಮುಳುಕ, ರೊಟ್ಟಿ, ವಡೆ, ಹೋಳಿಗೆ, ಸುಕ್ರುಂಡೆ, ಚಕ್ಕುಲಿ…. ಇನ್ನು ಅನೇಕ. ಹಲಸಿನ ಋತುವಿನಲ್ಲಿ ನಮ್ಮ ಅಡುಗೆಮನೆ ನಿಜಕ್ಕೂ ಸಂಶೋಧಾನಲಯವಾಗುತ್ತದೆ. ಗೃಹಿಣಿಯರು ವಿಜ್ಞಾನಿಗಳಾಗುತ್ತಾರೆ!.
ಕೇರಳದಲ್ಲಿ ಹಲಸಿನ ಬೃಹತ್ ಉದ್ಯಮ
ನೆರೆಯ ರಾಜ್ಯ ಕೇರಳದಿಂದ ಹಲಸಿನ ಹಣ್ಣು ಹಲಸಿನ ಕಡಬುಗಳು ಕೊಲ್ಲಿ ರಾಷ್ಟ್ರಗಳಿಗೆ ರಪ್ತಾಗುತ್ತದೆ. ಹಲಸಿನ ಮಂಚೂರಿಗೂ ಭಾರೀ ಬೇಡಿಕೆ ಇದೆ. ಅಲ್ಲಿ ಹಲಸು ದೊಡ್ಡ ಉದ್ಯಮವಾಗಿ ಬೆಳೆಯುತ್ತಿವೆ. ಇದಕ್ಕೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಹಲಸಿನ ವಾಣಿಜ್ಯ ಉಪಯೋಗ ಇನ್ನು ಬಲ್ಯಾವಸ್ಥೆಯಲ್ಲಿದೆ. ಆದರೂ ಹಲಸಿನ ಮೇಳಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಿರುತ್ತವೆ. ಹಲಸು ಆಹಾರ ಸುರಕ್ಷತೆಗೆ ಕೀಲಿಕೈ- ಇದು ಸಮ್ಮೇಳನದ ಸ್ಲೋಗನ್. ಹಲಸಿನಿಂದ ಆಹಾರ ಸುರಕ್ಷೆ ಮಾತ್ರವಲ್ಲ, ಸಣ್ಣ ಕ್ರಷಿಕರು ಸುರಕ್ಷೆಯ ಕೀಲಿಕೈಯೂ ಆಗಬೇಕು. ಗುಣಮಟ್ಟದ ಹಲಸಿನ ಬೀಜದ ಪುಡಿ, ತೊಳೆ ಪುಡಿಗಳಿಗೆ ರಫ್ತು ಸಾಧ್ಯತೆಯಿದೆ.
ಹಲಸಿನಲ್ಲಿ ಔಷದೀಯ ಗುಣಗಳು:
ಹಲಸಿನಲ್ಲಿ ಹಲವಾರು ಔಷದೀಯ ಗುಣಗಳಿವೆ ಅದಕ್ಕೆ ಒಂದು ಉದಾಹರಣೆಯಾಗಿ: ನೂರು ಗ್ರಾಮ್ ಹಲಸಿನ ಹಣ್ಣಿನಲ್ಲಿ 303 ಮಿ. ಗ್ರಾಂ. ಪೊಟ್ಯಾಶಯಂ ಇದೆ. ಪೊಟ್ಯಾಶಯಂ ಸೇವಿಸಿದರೆ ಅದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತದ ಏರೊತ್ತಡದಿಂದ ಬಳಲುತ್ತಿರುವವರಿಗೆ ಹಲಸಿನ ಹಣ್ಣು ತಿಂದರೆ ಆರೋಗ್ಯಕ್ಕೆ ಲಾಭ ಸಿಕ್ಕೀತು ಎನ್ನುತ್ತೆವೆ. ಈ ಕೂತುಹಲ ವಿಚಾರದ ಬಗ್ಗೆ ಹೆಚ್ಚಿನ ವೈಜ್ಞಾನಿಕ ಅಧ್ಯಯನ ಆಗಬೇಕಿದೆ. ಇನ್ನೂ ಆಳ ಅಧ್ಯಯನ ಆಗಿಲ್ಲದ ಅದೆಷ್ಟೋ ಔಷದೀಯ ಗುಣಗಳು ಈನಿರ್ಲಕ್ಷಿತ ಹಣ್ಣಿಗೆ ಇರುವ ಸಾಧ್ಯತೆಗಳಿವೆ. ಇದಲ್ಲದೆ ಹಲಸಿನ ಗಿಡದ ಬೇರನ್ನು ಕಷಾಯಕ್ಕಾಗಿ ತೊಗಟೆಯ ಬಿಳಿ ರಸ ಅಂಟು ಔಷಧ ಗುಣ ಹೊಂದಿದೆ. ಪಿತ್ತ ಶಮನಕ್ಕೆ ಎಳೆಯ ಹಲಸಿನ ಕಾಯಿ ಉತ್ತಮ. ಹಲಸಿನ ಬೀಜಗಳ ಪಲ್ಯ ಬಲವರ್ಧಕ ಮತ್ತು ವೀರ್ಯವರ್ಧಕವೆಂದು ಹೇಳಲಾಗುತ್ತಿದೆ. ಹಲಸಿನ ತೊಳೆಗಳಿಗೆ ಬಾಳೆಹಣ್ಣಿನ ತಿರುಳು, ಹಸಿ ಕೊಬ್ಬರಿ ತುರಿ, ಜೇನು ತುಪ್ಪ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ದುರ್ಬಲ ನರಗಳಿಗೆ ಬಲ ಬರುತ್ತದೆ ಎಂಬುದು ನಂಬಿಕೆ. ವಿಶ್ವದಲ್ಲೇ ಹಲಸಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ನಾವಿದ್ದೇವೆ. ಆದರೆ ಉತ್ಪಾದನೆಯ ಪಟ್ಟಿಯಲ್ಲಿ ಹೆಸರೇ ಕಾಣದ ಹಲವು ದೇಶಗಳು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಬಹಳ ಮುಂದಿವೆ.
ಗ್ರಾಮೀಣ ಆರ್ಥಿಕತೆಗೆ ದೊಡ್ದ ಕೊಡುಗೆ ಕೊಡುತ್ತಾ, ಸ್ಥಳಿಯ ಆಹಾರ ಸುರಕ್ಷತೆ ಒದಗಿಸಬಲ್ಲ ಅದ್ಬುತ ಆಹಾರಬೆಳೆಯನ್ನು ಬೆಳೆಸುವ ಊರುಗಳಲ್ಲಿ ಹಲಸನ್ನು ತರಕಾರಿಯಾಗಿ, ಹಣ್ಣಾಗಿ, ಸಂರಕ್ಷಿಸುತ್ತಾ ಆಹಾರವಸ್ತುವಾಗಿ ಬಳಸುವ ಅಭ್ಯಾಸ ಹೆಚ್ಚಬೇಕು. ವೈಜ್ಞಾನಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಈ ಕೆಲಗಿನೆ ವಿಷಯಗಳ ಬಗ್ಗೆ ಗಮನಹರಿಸಿದರೆ ಕಾಡಬೆಳೆಯಾಗಿದ್ದ ಹಲಸನ್ನು ಲಾಭದಾಯಕವಾದ ನಾಡಬೆಳೆಯಾಗಿ ಮಾಡಿಕೊಂಡು ರೈತರು ಜನರಿಗೆ ಉತ್ತಮ ಹಣ್ಣುಗಳನ್ನು ನೀಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು.

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here