ಅಕ್ಷಯ ತೃತೀಯ ಪ್ರಯುಕ್ತ ನಾಗರೀಕ ವೇದಿಕೆಯಿಂದ ಉಡುಪಿಯಲ್ಲಿ ಧಾನ್ಯ ಪೂಜೆ

Spread the love

ಉಡುಪಿ: ನಾಡಿನೆಲ್ಲೆಡೆ ಅಕ್ಷಯ ತೃತೀಯಾದ ಸಂಭ್ರಮ. ಎಲ್ಲೆಡೆ ಚಿನ್ನಾಭರಣಗಳನ್ನು ಕೊಂಡುಕೊಳ್ಳಲು ಮಳಿಗೆಗಳಿಗೆ ಜನ ಮುಗಿ ಬಿದ್ದರು . ಉಡುಪಿಯಲ್ಲಿ ನಾಗರೀಕ ವೇದಿಕೆ ಅಕ್ಷಯ ತೃತೀಯ ದಿನ ವಿಶೇಷ ಪೂಜೆ ಮಾಡಿ ಗಮನ ಸೆಳೆಯಿತು.
ಇಂದು ನಾಡಿನೆಲ್ಲೆಡೆ ಅಕ್ಷಯ ತೃತೀಯ ಹಬ್ಬದ ಸಂಭ್ರಮ. ಗೋಲ್ಡ್ ಶಾಪ್ಸ್ ಅಂತೂ ಫುಲ್ ರಶ್. ಕಾರಣ ಅಕ್ಷಯ ತೃತೀಯದಂದು ಚಿನ್ನಭರಣಗಳು ಕೊಂಡರೆ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಅಕ್ಷಯ ತೃತೀಯದಂದು ಮಾಡಿದ ಶುಭ ಕಾರ್ಯಗಳು ಸಿದ್ದಿಸುತ್ತದೆ, ಫಲ ಸಿಗುತ್ತದೆ ಎಂಬ ನಂಬಿಕೆಯ ಹಿನ್ನಲೆಯಲ್ಲಿ ಈ ದಿನ ಚಿನ್ನಾಭರಣಗಳನ್ನು ಕೊಂಡುಕೊಳ್ಳಲು ಜನ ಮುಗಿ ಬೀಳುವುದಲ್ಲದೇ ಅನೇಕ ಶುಭ ಕಾರ್ಯವನ್ನು ನಡೆಸುತ್ತಾರೆ. ಜನರು ಚಿನ್ನಾಭರಣ ಎಂಬ ಮೋಹಕ್ಕೆ ಒಳಗಾಗುತ್ತಿದ್ದಾರೆ . ಚಿನ್ನ ಖರೀದಿಯ ಬದಲಾಗಿ ನವ ಧಾನ್ಯಗಳನ್ನು ಖರೀದಿಸಿ , ಆ ಧಾನ್ಯಗಳು ಅಕ್ಷಯವಾಗಲೀ ಎಂಬ ಉದ್ದೇಶದಿಂದ ನವಧಾನ್ಯಗಳನ್ನು ಇಟ್ಟು ಉಡುಪಿಯಲ್ಲಿವಿಶೇಷ ಪೂಜೆ ನೆರವೇರಿಸಲಾಯಿತು. ಅಷ್ಟ ಮಠಗಳ ಯತಿಗಳಲ್ಲಿ ಒಬ್ಬರಾದ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಮಕ್ಷಮದಲ್ಲಿ ಈ ಪೂಜೆ ನಡೆಯಿತು.

image001akshaya-trithiya-udupi20160509 image002akshaya-trithiya-udupi20160509 image003akshaya-trithiya-udupi20160509 image004akshaya-trithiya-udupi20160509 image005akshaya-trithiya-udupi20160509

ಉಡುಪಿಯ ಮಂಜೂಷಾ ಚಂಡೆ ಬಳಗದ ಚಂಡೆ , ಮಹಿಳಾ ಭಜನಾ ತಂಡದಿಂದ ಭಜನೆ, ಉಡುಪಿ ಜನಾರ್ಧನ್ ಅವರ ವಾದ್ಯ ಮೇಳದ ಹಿಮ್ಮೇಳದಲ್ಲಿ ನವಧಾನ್ಯಗಳ ಪೂಜೆಯನ್ನು ಉಡುಪಿ ಅನಂತೇಶ್ವರದೇವಳದ ಪುರೋಹಿತ ಅನಂತ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ರಾಜ್ಯದ ಹಲವೆಡೆ ಭೀಕರ ಬರಗಾಲದ ಪರಿಸ್ಥಿತಿ ಇದೆ. ನೀರಿಗೆ ಹಹಾಕಾರ ಪಡುವ ಸ್ಥಿತಿ. ಜನರಿಗೆ ತಿನ್ನಲು ಬೇಕಾಗಿರುವುದು ಅನ್ನ, ಬೇಳೇ ಕಾಳು, ನವಧಾನ್ಯಗಳು ಆದ್ದರಿಂದ ಅಕ್ಷಯ ತೃತೀಯದಂದು ಜನರು ಚಿನ್ನ ಖರೀದಿಸುವ ಬದಲಾಗಿ ಧಾನ್ಯಗಳನ್ನು ಖರೀದಿಸಿ ಆ ಮೂಲಕ ಮುಂದಿನ ವರ್ಷಗಳು ಧಾನ್ಯಗಳು ಜನರಿಗೆ ಸರಿಯಾಗಿ ಸಿಗಲಿ, ಧಾನ್ಯಗಳು ಅಕ್ಷಯವಾಗಲಿ ಎಂಬ ಕಾರಣಕ್ಕಾಗಿ ಈ ವಿಶೇಷ ಪೂಜೆಯನ್ನು ನಡೆಸಲಾಯಿತು.
ಅಕ್ಷಯ ತೃತೀಯದಂದು ಖರೀದಿಸಿದ ಎಲ್ಲಾ ಚಿನ್ನಗಳು ಅಕ್ಷಯವಾಗುತ್ತದೆ ಎಂಬ ಮಾತು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಜನರ ನಂಬಿಕೆಯ ಅನುಸಾರವಾಗಿ ಅಕ್ಷಯ ತೃತೀಯ ಇದೀಗ ಚಿನ್ನ ಖರೀದಿಯ ಹಬ್ಬವಾಗಿ ಮಾರ್ಪಟ್ಟಿದೆ. ಜನರ ಇದೇ ನಂಬಿಕೆಯ ಅನುಸಾರವಾಗಿ ಚಿನ್ನ ಖರೀದಿಗಿಂತ ನವ ಧಾನ್ಯಗಳನ್ನೂ ಖರೀಸಿದಿ ಈ ಮೂಲಕ ಧಾನ್ಯಗಳೂ ಅಕ್ಷಯವಾಗಲೀ ಎಂಬ ನಾಗರೀಕ ಸಮಿತಿಯ ಉದ್ದೇಶ ಅರ್ಥಪೂರ್ಣವಾಗಿರುವುದಂತೂ ಸತ್ಯ….


Spread the love