ಉಡುಪಿ: ಸಂತ ಮೇರಿ ಕಾಲೇಜಿನಲ್ಲಿ ಸಮುದಾಯದಲ್ಲಿ ಕಾರ್ಯಕ್ರಮಗಳ ಆಯೋಜನೆ ಕಾರ್ಯಗಾರ

Spread the love

ಉಡುಪಿ: ಪ್ರತೀ ಕಾರ್ಯಕ್ರಮಗಳೂ ಸರಿಯಾದ ಯೋಜನೆ, ತಯಾರಿ ಮತ್ತು ಆಯೋಜನೆಗಳಿಂದ ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಕಾರ್ಯಕ್ರಮಗಳ ಆಯೋಜನೆಯ ಕುರಿತಾದ ತರಬೇತಿಗಳು ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ಸಹಕಾರಿಯಾಗತ್ತದೆ ಎಂಬುದಾಗಿ ಶಿರ್ವದ ಸಂತ ಮೇರಿ ಮತ್ತು ಡೋನ್ ಬೋಸ್ಕೋ ವಿದ್ಯಾ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕರಾದ ರೆ. ಡಾ. ಅನಿಲ್ ಕ್ಯಾಸ್ತಲಿನೋರವರು ನುಡಿದರು.

1

ಇವರು ಸಂತ ಮೇರಿ ಕಾಲೇಜು, ಶಿರ್ವದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಸಮುದಾಯದಲ್ಲಿ ಕಾರ್ಯಕ್ರಮಗಳ ಆಯೋಜನೆ ಎಂಬ ವಿಷಯದ ಬಗ್ಗೆ ಹಮ್ಮಿಕೊಂಡ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ರಾಜನ್ ವಿ. ಎನ್.ರವರು ಕಾರ್ಯಗಾರಕ್ಕೆ ಶುಭ ಕೋರದರು. ವೇದಿಕೆಯಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಕಸ್ಥರಾದ ಶ್ರೀಮತಿ ಲಕ್ಷ್ಮೀ ಆಚಾರ್ಯರವರು ಉಪಸ್ಥಿತದ್ದರು.

ಕಾರ್ಯಗಾರದ ತರಬೇತುದಾರರಾಗಿ ಆಗಮಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜು, ಉಜಿರೆಯ ಪ್ರಾಂಶುಪಾಲರುರಾದ ಡಾ. ಟಿ. ಕೃಷ್ಣಮೂರ್ತಿಯವರು ಹಲವು ಚಟುವಟಿಕೆಗಳ ಮೂಲಕ ಸಮುದಾಯದಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಣಾಕಾರಿಯಾಗಿ ತರಬೇತಿ ನೀಡಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರೀ ಸ್ಟೀಫನ್ ರೋಶನ್‍ರವರು ನಿರೂಪಿಸಿ, ಕುಮಾರಿ ವಾಣಿರವರು ಸ್ವಾಗತಿಸಿ, ಕುಮಾರಿ ತೇಜಸ್ವಿನಿರವರು ವಂದಿಸಿದರು.


Spread the love