ಐವನ್ ಡಿಸೋಜಾರವರ ಹೇಳಿಕೆಗೆ ದಕ ಜಿಲ್ಲಾ ಬಿಜೆಪಿ ಖಂಡನೆ

Spread the love

ಐವನ್ ಡಿಸೋಜಾರವರ ಹೇಳಿಕೆಗೆ ದಕ ಜಿಲ್ಲಾ ಬಿಜೆಪಿ ಖಂಡನೆ
ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರ ಹೇಳಿಕೆಯನ್ನು ದ.ಕ ಜಿಲ್ಲಾ ಬಿಜೆಪಿ ಖಂಡಿಸುತ್ತದೆ.
ಕಾವೇರಿ ನದಿ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯ ಮನವೊಲಿಸದೆ ರಾಜ್ಯ ಸರಕಾರವನ್ನು ನಿಷ್ಕ್ರೀಯಗೊಳಿಸಲು ಪ್ರಯತ್ನಿಸುತ್ತಾರೆ ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದೀರಿ.
ಮುನ್ನೆ ತಾನೇ ನಡೆದಂತ ರಾಜ್ಯ ವಿಶೇಷ ಅಧಿವೇಶನದಲ್ಲಿ ಪರಿಷತ್‍ನ ಮತ್ತು ವಿಧಾನ ಸಭೆಯ ಬಿಜೆಪಿ ಎಲ್ಲಾ ಸದಸ್ಯರು ಭಾಗವಹಿಸಿ ಸರಕಾರದ ನಿರ್ಣಯಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ಕೊಟ್ಟಿರುತ್ತೇವೆ. ಕಾವೇರಿ ವಿವಾದ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯವನ್ನು ಬೆಂಬಿಡದೆ ಕಾಡುತ್ತಿರುವ ಸಮಸ್ಯೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇರುವಾಗಲೂ ಕಾವೇರಿ ಸಮಸ್ಯೆಯಿತ್ತು. ಆಗಲೂ ನ್ಯಾಯಾಂಗದ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದೆ ಹೊರತು ಯಾವುದೇ ಪ್ರಧಾನಿಗಳ ಮಧ್ಯ ಪ್ರವೇಶ ಇರಲಿಲ್ಲ. ಆದರೆ ಕಾಂಗ್ರೆಸಿನವರಿಗೆ ದಿನದ 24 ಗಂಟೆಯು (ಹಗಲಲ್ಲಿ ಮಾತ್ರವಲ್ಲ) ರಾತ್ರಿಯ ನಿದ್ದೆಯ ಕನಸಿನಲ್ಲಿ ಮೋದಿಯವರ ಹೆಸರು ಕಾಂಗ್ರೆಸಿಗರ ತಲೆಯಲ್ಲಿ ತಿರುಗಾಡುತ್ತದೆ.
ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸಿನವರಿಗೆ ಮೋದಿಯವರ ಹೆಸರನ್ನು ಹೇಳದೆ ತಿಂದ ಆಹಾರ ಜೀರ್ಣವಾಗುವುದಿಲ್ಲ. ಕೇಂದ್ರ ಸರಕಾರದಿಂದ ಬರುವಂತಹ ಅನುದಾನಗಳನ್ನು ಸರಿಯಾಗಿ ವಿನಿಯೋಗಿಸದೆ ರಾಜ್ಯದ ಹಲವಾರು ಗಂಭೀರ ಸಮಸ್ಯೆಗಳು ಇದ್ದಾಗಲೂ ಪ್ರಧಾನಮಂತ್ರಿ ಮತ್ತು ಕೇಂದ್ರದ ಸಂಬಂಧ ಪಟ್ಟ ಇಲಾಖೆಯ ಮಂತ್ರಿಗಳು ಕರೆಯುವ ಅಭಿವೃದ್ಧಿ ಸಭೆಗಳಿಗೆ ಭಾಗವಹಿಸದೇ ನಿರ್ಲಕ್ಷ ತೋರುವ ಸಿದ್ದರಾಮಯ್ಯನವರ ಸರಕಾರ. ಈಗ ಕಾವೇರಿ ವಿವಾದ ಜೀರ್ಣಿಸಿಕೊಳ್ಳಲು ಕಷ್ಟವಾದಾಗ ರಾಜ್ಯ ಬಿಜೆಪಿ ಶಾಸಕರು, ಬಿಜೆಪಿ ಸಂಸದರ ಮತ್ತು ಪ್ರಧಾನಿಯವರ ಮೇಲೆ ಗೂಬೆ ಕೂರಿಸುವಂತಹ ಹೇಳಿಕೆಯನ್ನು ಕೊಡುವುದು ಖಂಡನೀಯ.
ಮಂತ್ರಿಗಳಾದ ಯು.ಟಿ,ಖಾದರ್‍ರವರು ಮತ್ತು ವಿಧಾನ ಪರಿಷತ್‍ನ ಮುಖ್ಯ ಸಚೇತಕಾರದ ಐವನ್ ಡಿ’ಸೋಜಾರವರ ಬೇಜವಾಬ್ದಾರಿ ಹೇಳಿಕೆಯನ್ನ ದ.ಕ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ ರವರು ಹೇಳಿರುತ್ತಾರೆ.


Spread the love