ಜಗದೀಶ್ ಕಾರಂತ್ ಮೇಲೆ ಕ್ರಮಕ್ಕೆ ಆಗ್ರಹಸಿ ಹ್ಯೂಮನಿಟೇರಿಯನ್ ಫೋರಮ್ ಗೃಹಸಚಿವರಿಗೆ ಮನವಿ

Spread the love

ಜಗದೀಶ್ ಕಾರಂತ್  ಮೇಲೆ ಕ್ರಮಕ್ಕೆ  ಆಗ್ರಹಸಿ ಹ್ಯೂಮನಿಟೇರಿಯನ್  ಫೋರಮ್ ಗೃಹಸಚಿವರಿಗೆ ಮನವಿ

ಮಂಗಳೂರು:  ಪೊಲೀಸ್  ಇಲಾಖೆಗೆ ತಮ್ಮ ಇಲಾಖೆಯ ವಿರುದ್ದ ಅವಹೇಳನಕಾರಿಯಾಗಿ ಭಾಷಣ ಮಾಡಿದ ಹಾಗೂ ಕೋಮು ಪ್ರಚೋದನೆ ಮಾಡುವ ಹುನ್ನಾರ ನಡೆಸಿದ ವ್ಯಕ್ತಿಯ ಮೇಲೆ ಸ್ವಯoಪ್ರೇರಿತ ದೂರು ದಾಖಲಿಸದೇ ಇರುವುದು ವಿಪರ್ಯಾಸವಾಗಿದ್ದು.ಈ ಕೂಡಲೇ ಜಗದೀಶ್ ಕಾರಂತ್ ಮೇಲೆ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಹ್ಯೂಮನಿಟೇರಿಯನ್  ಫೋರಮ್ ವತಿಯಿಂದ  ಗ್ರಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಸಂಪ್ಯ ಠಾಣೆಯ ಎಸ್.ಐ.ಅಬ್ದುಲ್ ಖಾದರ್ ಮತ್ತು ಸಿಬ್ಬಂದಿಗಳು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾರೇಂದು ಆಪಾದಿಸಿ ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯ ವಿರುದ್ದ ಹಿಂದು ಜಾಗರಣ ವೇದಿಕೆಯು ನಡೆಸಿದ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ರವರು ಅತ್ಯಂತ ಪ್ರಚೋದನಕಾರಿಯಾಗಿ ಭಾಷಣವನ್ನು ಮಾಡಿ ಎಸ್.ಐ.ಅಬ್ದುಲ್ ಖಾದರ್ ರವರನ್ನು ಅಶ್ಲೀಲ ಪದಗಲಿಂದ ಬಹಿರಂಗವಾಗಿ   ಬೆದರಿಕೆ ಹಾಕಿ ಕತ್ತೆಯ ಮೇಲೆ ಮೆರೆವಣಿಗೆ ಮಾಡಿಸುವುದಾಗಿ ನಿಂದಿಸಿದಲ್ಲದೆ ನಮಗೆ ಕಾನೂನಿನ ಯಾವುದೇ ಭಯವಿಲ್ಲ ಎOದು ನಾಗರಿಕ ಸಮಾಜಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಸವಾಲೊಡ್ಡಿದ  ಜಗದೀಶ್ ಕಾರಂತ್ ಪುತ್ತೂರನ್ನು ಸುರತ್ಕಲ್ ಆಗಿ  ಪರಿವರ್ತನೆ ಮಾಡುತ್ತೇವೇಂದು   ಕೋಮು ಸೂಕ್ಷ್ಮ ಪ್ರದೇಶವಾದ ಪುತ್ತೂರಿನಲ್ಲಿ ಹೇಳಿರುವುದು ಹಾಗೂ ಈ ತನಕ ಕಾರಂತರ ಮೇಲೆ ದೂರು ದಾಖಲಾಗಿರದೇ ಇರುವುದನ್ನು ನೋಡಿದರೆ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆಯಲ್ಲದೆ

ನಿಯೋಗದಲ್ಲಿ ಹಾರಿಸ್ ಬೈಕಂಪಾಡಿ. ಎಸ್.ಕೆ.ಇಲ್ಯಾಸ್ ಆಂಗರಗುಂಡಿ, ಕೈಗಾರಿಕೋದ್ಯಮಿಗಳಾದ ಬಿ.ಏ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಶರಫುದ್ದೀನ್ (ಬ್ಲೂಚಿಪ್) ಉಪಸ್ತಿತರಿದ್ದರು


Spread the love