ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಶವವಾಗಿ ಪತ್ತೆ

Spread the love

ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಶವವಾಗಿ ಪತ್ತೆ

ಕುಂದಾಪುರ:ಮನೆಯಿಂದ ಹೇಳದೆ ಕೇಳದೆ ನಾಪತ್ತೆಯಾದ ಮಹಿಳೆ ಹೆಮ್ಮಾಡಿ ಗ್ರಾಮದ ಮಡಿವಾಳ ಕೆರೆ ಬಳಿ ಇರುವ ತೋಟದ ಬಾವಿಯಲ್ಲಿ ಶವವಾಗಿ ಪತ್ತೆ ಯಾಗಿದ್ದಾರೆ.

ಹೆಮ್ಮಾಡಿಯ ಮೂವತ್ತುಮುಡಿ ನಿವಾಸಿ ಮಾಜಿ ಯೋಧ ತಿಯಾ ಒಲಿವೇರಾರ ಮಗಳು ಸಿಲ್ವಿನ್ ಒಲಿವೇರಾ ( 51) ಮೃತ ಮಹಿಳೆ.

ತನ್ನ ಗಂಡನಿಂದ ಬೇರೆಯಾಗಿ ಅಣ್ಣ ಮಾರ್ಟಿನ್ ಒಲಿವೇರಾ ಜೊತೆ   ಕಟ್ ಬೆಲ್ತೂರು ಗ್ರಾಮ ಕುಂದಾಪುರದಲ್ಲಿ ವಾಸವಾಗಿದ್ದರು.

ಅವರಿಗೆ ಮಕ್ಕಳಿಲ್ಲದ ಕಾರಣ ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದರು ಮಂಗಳವಾರ ಸಂಜೆ ಯಾರಿಗೂ ಹೇಳದೆ ಮನೆಯಿಂದ ಹೊರಗೆ ಹೋದವರು ವಾಪಸ್ಸು ಬಾರದೆ ಕಾಣಿಯಾಗಿದ್ದರು ಮನೆಯವರು ಹುಡುಕಾಟ ನೆಡೆಸಿದರು ಪತ್ತೆಯಾಗದ ಕಾರಣ ಈ ಬಗ್ಗೆ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರ್ಟಿನ್ ಒಲಿವೇರಾ ದೂರು ನೀಡಿದ್ದರು.

ಮರುದಿನ ಮದ್ಯಾಹ್ನ ಹೆಮ್ಮಾಡಿ ಗ್ರಾಮದ ಮಡಿವಾಳ ಕೆರೆಯ ಬಳಿಯಿರುವ ಖಾಸಗಿ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ, ಬಾವಿಯ ಬಳಿ ಚಪ್ಪಲಿ ದೊರೆತಿದ್ದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಶಂಕಿಸಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.


Spread the love