ಮಹಿಳಾ ಸುರಕ್ಷತೆ ಬಗ್ಗೆ ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು ಕಾರ್ಯಾಗಾರ

Spread the love

ಮಹಿಳಾ ಸುರಕ್ಷತೆ ಬಗ್ಗೆ ಹಾಗೂ ಮಹಿಳಾ ಸಂತ್ರಸ್ಥರಿಗೆ/ನೊಂದವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಹಾಗೂ ಸರಕಾರದಿಂದ ನೀಡುವ ಪರಿಹಾರದ ಬಗ್ಗೆ ಅರಿವು ಕಾರ್ಯಾಗಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಪೊಲೀಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

awarness-police-

ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಭೂಷಣ್ ಗುಲಾಬ ರಾವ್ ಬೊರಸೆ, ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ. ಮಂಗಳೂರು ಇವರು ವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ  ಮಲ್ಲನ ಗೌಡ ಸದಸ್ಯ  ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು,ಶ್ರೀ ವೇಧಮೂರ್ತಿ. ಹೆಚ್ಚುವರಿ ಪೊಲೀಸ್ ಅಧೀಕ್ಷರು ದ.ಕ ಜಿಲ್ಲೆ, ರಿಷ್ಯಂತ್ ಎಎಸ್‌ಪಿ, ಪುತ್ತೂರು, ಉಸ್ಮಾನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಪೂರ್ಣಿಮಾ,ಮತ್ತು ಭರತಾಂಜಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ’ಸಂತ್ರಸ್ಥ/ಅವಲಂಬಿತರ ಪರಿಹಾರ ಯೋಜನೆ -2011, ಮಹಿಳೆಯರ ಸುರಕ್ಷತೆಯ ಬಗ್ಗೆ ಸ್ಥಾಪಿಸಿರುವ ಸ್ತೈರ್ಯ ನಿಧಿ ಬಗ್ಗೆ,ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗ್ಗೆ ಹಾಗೂ ಠಾಣೆಗೆ ಬರುವ ನೊಂದ ಮಹಿಳೆಯರಿಗೆ ಸ್ಪಂದಿಸುವ ಕ್ರಮಗಳ ಕುರಿತು ಅರಿವು ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೆಣ್ಣು ಮಕ್ಕಳ ಶಾಲೆ ಮತ್ತು ಕಾಲೇಜು ಹಾಗೂ ಮಹಿಳಾ ಹಾಸ್ಟೇಲ್ ಗಳಲ್ಲಿ ತೆಗೆದುಕೊಂಡ ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸದ್ರಿ ಸಮಾರಂಭದಲ್ಲಿ ಅಮಾನುಲ್ಲಾ.ಎ ಪಿಐ. ಡಿಸಿಐಬಿರವರು ಸ್ವಾಗತಿಸಿ ವಂದಿಸಿದರು.


Spread the love