ಮಾದರಿಯಾಗಿ ಜೀವಿಸಿ : ನೌಫಾಲ್ ಸಖಾಫಿ ಕಳಸ ಕರೆ

Spread the love

ಮಾದರಿಯಾಗಿ ಜೀವಿಸಿ : ನೌಫಾಲ್ ಸಖಾಫಿ ಕಳಸ ಕರೆ

ಕೇವಲ ಮನುಷ್ಯ ವರ್ಗಕ್ಕೆ ಮಾತ್ರವಲ್ಲ ಸಕಲ ಜೀವ ಸಂಕುಲಗಳ ಮೇಲೆ ಕರುಣೆ ಹಾಗೂ ಪ್ರೀತಿ ತೋರಲು ಅಂತ್ಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಗೆ ಅನುಕರಣೀಯ ಮಾದರಿಯಾಗಿದ್ದಾರೆ ಎಂದು ಪ್ರವಾದಿ ಮುಹಮ್ಮದ್ (ಸ.) ರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ವಿವರಿಸಿದ ಕರ್ನಾಟಕದ ಯುವ ಸುನ್ನೀ ವಿದ್ವಾಂಸ ಹಾಗೂ ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಎಲ್ಲರೂ ಪ್ರವಾದಿ (ಸ.) ರನ್ನು ಮಾದರಿಯಾಗಿಸಿ ಜೀವಿಸಿದರೆ ಎಲ್ಲೆಲ್ಲೂ ಶಾಂತಿ ಸುಭಿಕ್ಷೆ ನೆಲೆಸುವುದೆಂದು ನುಡಿದರು.

ಅವರು ಕೆ ಸಿ ಎಫ್ ಅಲ್ ಐನ್ ಪ್ರಾಂತದ ವತಿಯಿಂದ ಜರಗಿದ ಮೆಹಫಿಲೇ ಮುಸ್ತಫಾ (ಸ) ಎಂಬ ಘೋಷವಾಕ್ಯದಲ್ಲಿ ನಡೆದ “ಸಹಿಷ್ಣುತೆಯ ಸಂದೇಶವಾಹಕ” ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿ ಪ್ರವಚನಗೈದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ನಿರ್ಭರ ದುಆ ನಡೆಸಿದ ಉಳ್ಳಾಲ ಖಾಝಿಯಾಗಿರುವ ಸಯ್ಯದ್ ಕೂರ ತಂಗಳ್ ಅವರು ಸುನ್ನತ್ ಜಮಾಅತ್ ನ ದೃಢ ತಳಹದಿಯಲ್ಲಿ ನೆಲೆ ನಿಂತು ಜನರೊಟ್ಟಿಗೆ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಬಾಳುವಂತೆ ಉಪದೇಶಿಸಿದರು.ಸಯ್ಯದ್ ಕೂರ ತಂಗಳ್ ಹಾಗೂ ಮುಹಮ್ಮದ್ ಹನೀಫಿ ಲತೀಫಿ ಇವರನ್ನು ಪ್ರಾಂತ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಸ್ಸುಫ್ಫ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ತಂಗಳರು ಪ್ರಶಸ್ತಿ ಪತ್ರ ವಿತರಿಸಿದರು.

ಮುಹಮ್ಮದ್ ಹನೀಫಿ ಲತೀಫಿ ಉಸ್ತಾದರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಾಂತ ಅಧ್ಯಕ್ಷರಾದ ಮುಸ್ತಾಕ್ ಮುಹಮ್ಮದ್ ತುಂಬೆ ವಹಿಸಿದ್ದರು.ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಅಬ್ದುರ್ರಜ್ಜಾಕ್ ಹಾಜಿ ಸ್ವಾಗತಿಸಿದರು. ಯು.ಎ. ಇ. ಕೆ ಸಿ ಎಫ್ ನ ರಾಷ್ಟ್ರೀಯ ನಾಯಕರುಗಳು ಅತಿಥಿಗಳಾಗಿ ಭಾಗವಹಿಸಿದ್ದರು. ಮೀಲಾದ್ ಸ್ವಾಗತ ಸಮಿತಿಯ ಕಾರ್ಯದರ್ಶಿಯಾದ ಅಬ್ದುರ್ರಹೀಮ್ ಸಕಲೇಶಪುರ ಕೊನೆಯಲ್ಲಿ ವಂದನಾರ್ಪಣೆಗೈದರು.

ಯಶಸ್ವಿಯಾಗಿ ನೆರವೇರಿದ ಕೆಸಿಎಫ್ದುಬೈನಾರ್ತ್ಝೋನ್   “ ಮೆಹಫಿಲೇ ಮುಸ್ತಫಾ ” ಮೀಲಾದ್ಸಮಾವೇಶ

ಕರ್ನಾಟಕ ಕಲ್ಚರಲ್ ಫೌಂಡೇಶನ್ ನಾರ್ತ್ ಝೋನ್ ವತಿಯಿಂದ ಬ್ರಹತ್ ಮೀಲಾದ್ ಸಮಾವೇಶ ಪರ್ಲ್ ಕ್ರೀಕ್ ಹೋಟೆಲ್ ದೇರಾ ದುಬೈ ನಲ್ಲಿ ಅದ್ದೂರಿಯಾಗಿ ನಡೆಯಿತು , ಸಂಜೆ 6 ಗಂಟೆಗೆ ವಿಶೇಷ ತರಬೇತಿ ಪಡೆದ ಬುರ್ದಾ ತಂಡ ದಿಂದ ಸೇರಿದ ಪ್ರವಾದಿ ಅನುಯಾಯಿ ಗಳನ್ನೂ ರೋಮಾಂಚಗೊಳಿಸುವ ಬುರ್ದಾ ಆಲಾಪನೆಯು ನಡೆಯಿತ್ತು . ನಂತರ ಗೌರ್ವಾನಿತ ಉಸ್ತಾದ್ ಗಳ ನೇತೃತ್ವದಲ್ಲಿ ಭಕ್ತಿ ನಿರ್ಭಲವಾದ ಮೌಲೀದ್ ಪಾರಾಯಣ ನಡೆಯಿತ್ತು . ಸಹಿಷ್ಣತೆಯ ಸಂದೇಶ ವಾಹಕ ಎಂಬ ಘೋಷ ವಾಕ್ಯದೊಂದಿಗೆ ಮೆಹಫಿಲೇ ಮುಸ್ತಫಾ ಎಂಬ ಹೆಸರಿನಡಿ ಬ್ರಹತ್ ಮೀಲಾದ್ ಸಮಾವೇಶದ ಸಭಾಕಾರ್ಯಕ್ರಮ ನಡೆಯಿತ್ತು ಪ್ರಸ್ತುತ ಸಮಾವೇಶವನ್ನು ಕರ್ನಾಟಕ ರಾಜ್ಯದ ಸುನ್ನತ್ ಜಮಾಹತಿನ ಆವೇಶ ಕಾರ್ಯಕರ್ತರ ಪ್ರೀತಿಯ ಸಂಘ ಕುಟುಂಬದ ಜೀವಾಳು ಇತ್ತೀಚಿಗೆ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ವೆಂಬ ಮಹಾ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಆಯ್ಕೆ ಗೊಂಡ ಮೌಲಾನಾ ಜಿ ಎಂ ಕಾಮಿಲ್ ಸಖಾಫಿ ಉದ್ಘಾಟನೆ ನೆರವೇರಿಸಿ ಪುಣ್ಯ ಪ್ರವಾದಿ ಸಲ್ಲಾಲಾವುವ ಸಲ್ಲಮರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಕೊಂಡಾಡುವಾಗ ಆ ಪ್ರವಾದಿ ಯಾ ಸಂದೇಶ ಗಳನ್ನೂ ಮೈಗೂಡಿಸಿ ಜೀವನನಡೆಸಿ ನಿಜವಾದ ಪ್ರವಾದಿ ಪ್ರೇಮಿ ಆಗಬೇಕೆಂದು ಕರೆನೀಡಿದರು .

ಮುಖ್ಯ ಭಾಷಗಾರರಾಗಿ ಆಗಮಿಸಿದ ದಾರುಲ್ ಅಶರೀಯ ಸುರಬೈಲ್ ವಿದ್ಯಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ದಕ್ಷಿಣ ಜಿಲ್ಲಾ ಸುನ್ನಿ ಯುವಜನ ಸಂಘ ದ ನಾಯಕರು ಖ್ಯಾತ ವಾಗ್ಮಿಯಾದಬಹು : ಮುಹಮ್ಮದಾಲೀ ಸಖಾಫಿ ಸುರಬೈಲ್ ಭಾಷಣ ಮಾಡುತ್ತಾ ಮುಸ್ಲಿಂ ಲೋಕದ ಪರಮೋಚ್ಚ ನಾಯಕ 1400 ವರ್ಷಗಳ ಹಿಂದೆ ಅರೇಬಿಯನ್ ನಾಡಿನಲ್ಲಿ ಅಂತಿಮ ಪ್ರವಾದಿ ಯಾಗಿಜನಿಸಿದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅಲ್ ಅಮೀನ್ ಎಂದು ಕರೆಯಲ್ಪಟ್ಟು 63 ವರ್ಷಗಳ ಮಾದರಿ ಯೋಗ್ಯ ಜೀವನ ನಡೆಸಿ ಪರಿಶುದ್ಧ ಇಸ್ಲಾಂ ಧರ್ಮವನ್ನು ಜಗತ್ತಿನ ಎಲ್ಲ ಕಡೆ ಹರಡುವಂತೆ ಮಾಡಿ ಶಾಂತಿಯ ಸಂದೇಶವನ್ನು ಸಾರಿದ ಪ್ರವಾದಿ ಸಲ್ಲಾಲಾವುವಸಲ್ಲಮರ ಜೀವನ ಸಂದೇಶವನ್ನು ಸೇರಿದ ಜನಸಮೂಹ ರೋಮಾಂಚನಗೊಳ್ಳುವಂತೆ ವಿಷಯ ಮಂಡಿಸಿದರು.

ನಂತರ ಪ್ರಸ್ತುತ ಕಾರ್ಯಕ್ರಮದ ಕೇಂದ್ರಬಿಂದು ದಕ್ಷಿಣಕನ್ನಡ ಜಿಲ್ಲಾ ಸಂಯುಕ್ತ ಖಾಝಿವರ್ಯರು ಸಮುದಾಯದ ಆದ್ಯಾತ್ಮಿಕ ಗುರುಗಳು ಆದ ಅಸ್ಸಯ್ಯದು ನಫಝಲ್ಕೊಯ್ಯಮ್ಮಕೂರತ್ತಂಗಳ್ರವರಭಕ್ತಿ ನಿರ್ಭಲವಾದದುವಾ ನಡೆಯಿತು ಹಾಗು ಸೇರಿದ ಜನಸಮೂಹಕ್ಕೆಅರ್ಥಗರ್ಭಿತವಾದ ಮಾತುಗಳಿದ ಉಪದೇಶನೀಡಿದರು. ಹಾಗು ಇದೆ ಸಂದರ್ಭದಲ್ಲಿ ಇಸ್ಲಾಮಿಕ್ಪಠಣ ತರಗತಿಯಾದ ಅಸ್ಸುಫಾ ಪರೀಕ್ಷೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಹಾಗು ತೃತೀಯ ಸ್ಥಾನಪಡೆದ ಹಾಗು ಮೀಲಾದ್ಸಮಾವೇಶ ಪ್ರಯುಕ್ತ ನವಂಬರ್ 30 ರಂದು ನಡೆದಪ್ರತಿಭೋತ್ಸವದಲ್ಲಿ ಕ್ರಮವಾಗಿ ಂ ,ಃ , ಅ ಕೆಟಗರಿಗಳಲ್ಲಿ ಚಾಂಪಿಯನ್ಹಾಗಿ ಆಯ್ಕೆಯಾದವರಿಗೆ ಸಯ್ಯದ್ಕೂರತ್ತಂಗಳ್ರವರ ದಿವ್ಯಹಸ್ತದಿಂದ ಬಹುಮಾನ ವಿತರಿಸಿದರು .

ಸಮಾರಂಭದಲ್ಲಿ ಮುಖ್ಯಅಥಿತಿಗಳಾಗಿ ಉದ್ಯಮಿ ಇಕ್ಬಾಲ್ಅಜ್ಮಾನ್ , ನಾರ್ತ್ಝೋನ್ಅ ಧ್ಯಕ್ಷರಾದ ಉಸ್ತಾದ್ಅ ಬ್ದುಲ್ಲಾಮುಸ್ಲಿ ಯಾರ್ಕುಡ್ತೆ ಮೊಗೆರು , ಕೆಸಿಎಫ್ಯುಎ ಇರಾಷ್ಟ್ರಿಯ ಪ್ರಧಾನಕಾರ್ಯದರ್ಶಿ ಜನಾಬ್ಇಕ್ಬಾಲ್ಕಾಜೂರ್ , ನಾರ್ತ್ಝೋನ್ಕೋಶಾಧಿಕಾರಿ ಅಬೂಬಕ್ಕರ್ಕೊಟ್ಟಮುಡಿ , ಕೆಸಿಎಫ್ನಾಯಕರಾದ ಉಸ್ಮಾನ್ಹಾಜಿನಾಪೋಕ್ಲು , ಇಬ್ರಾಹಿಂ ಸಖಾಫಿಕೆದುಂಬಾಡಿ , ಖಾದರ್ಸಾಲೆತ್ತೂರ್ , ಹಾಜಿನಝೀರ್ಕೆಮ್ಮಾರ , ಇಬ್ರಾಹಿಂಫೈಝಿಮೊದಲಾದಗಣ್ಯರು ಉಪಸಿತರಿದ್ದರು , ಸಭಾಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಮೀಲಾದ್ಸ್ವಾಗತ ಸಮಿತಿ ಛೇರ್ಮನ್ಹಾಜಿಅಶ್ರಫ್ಅಡ್ಯಾರ್ವಹಿಸಿದರು , ನಾರ್ತ್ಝೋನ್ಸಂಘಟನಾವಿಭಾಗದಅಧ್ಯಕ್ಷರಾದಬಹು : ಅಬ್ದುಲ್ಅಝೀಝ್ಲ ತೀಫಿ ಕೆಸಿಎಫ್ಹಮ್ಮಿಗೊಳ್ಳುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿ ಆಗಮಿಸಿದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು, ಕಾರ್ಯಕ್ರಮದ ಯಶಸ್ವಿಗಾಗಿ ಲತೀಫ್ಪಾತೂರ್ , ರಫೀಕ್ಸಂಪ್ಯ , ನಿಯಾಝ್ಬಸರ, ಮಜೀದ್ಮಂಜನಾಡಿ , ರಫೀಕ್ಜೆಪ್ಪು , ರಹೀಮ್ಕೊಡಿ , ಶಕೂರ್ಮನಿಲಾ , ಇಸ್ಮಾಯಿಲ್ಮದನಿನಗರ್ರಿಫಾಯಿಗೂನಡ್ಕ , ಹಬೀಬ್ಈಶ್ವರಮಂಗಿಲ , ಮೊದಲಾದವರು ಸಹಕರಿಸಿದರು . ಹಬೀಬ್ಪುಣಚ ಹಾಗು ಅಬ್ದುಲ್ರಝಕ್ಬುಸ್ತಾನಿ ಛಾಯಾಗ್ರಾಹಕರಾಗಿ ಸಹಕರಿಸಿದರು

ಕಮಾಲ್ಅಜ್ಜಾವರಹಾಗುರಿಯಾಝ್ಕೊಂಡೆಂಗೇರಿ ಕಾರ್ಯಕ್ರಮ ನಿರೂಪಿಸಿ ಹಾಜಿನ ವಾಝ್ಕೋಟೆಕ್ಕಾರ್ವಂದನಾರ್ಪಣೆಗೆಯ್ದರು .


Spread the love