ಮುನಿರಾಜ ರೆಂಜಾಳ -ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ತುಳುನಾಡ ವರ್ಣನೆ

Spread the love

ಮುನಿರಾಜ ರೆಂಜಾಳ -ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ತುಳುನಾಡ ವರ್ಣನೆ

ಮೂಡಬಿದಿರೆ: ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಧೈರ್ಯಶಾಲಿ ಕವಿ ರತ್ನಾಕರವರ್ಣಿಯ, ಖಳನಾಯಕನೊಬ್ಬನನ್ನು ನಾಯಕನಾಗಿಸುವ ಮೂಲಕ ಅದುವರೆಗೂ ಇದ್ದ ಸಿದ್ದಮಾದರಿಯ ಚೌಕಟ್ಟನ್ನು ಮುರಿಯುವ ಪ್ರಯತ್ನವನ್ನು ಕಾಲದ ಹಂಗನ್ನೂ ತೊರೆದು ಆತ ಮಾಡಿದ, ಆ ಕಾರಣಕ್ಕಾಗಿಯೇ ರತ್ನಾಕರವರ್ಣಿ ಒರ್ವ ಕ್ರಾಂತಿಕವಿ ಎಂದರೆ ತಪ್ಪಾಗಲಾರದು ಎಂದು ವಿದ್ವಾಂಸರಾದ ಮುನಿರಾಜ ರೆಂಜಾಳ ಅವರು ಅಭಿಪ್ರಾಯಪಟ್ಟರು.

 ಮೂಡಬಿದಿರೆಯ ಆಳ್ವಾಸ ಪದವಿ ಕಾಲೇಜಿನಲ್ಲಿ ನಡೆದ “ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ತುಳುನಾಡ ವರ್ಣನೆ” ಎಂಬ ವಿಚಾರದ ಕುರಿತು ಮಾತನಾಡಿದ ಅವರು ತುಳುನಾಡ ಮದುವೆಯ ಸಂಪ್ರದಾಯ, ನಾಟ್ಯಕಲಾಪ್ರಕಾರದಲ್ಲಿ ನಿರೂಪಿತಗೊಂಡ ಯಕ್ಷಗಾನದ ಚಿತ್ರಣ, ಕಡಲಿನ ವರ್ಣನೆ,  ತುಳು ಭಾಷಿಕ ಸೊಗಡುಗಳನ್ನು ಭರತೇಶ ವೈಭವದಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿದರು.

ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು ಹಾಗೂ ಮಹಾಕವಿ ರತ್ನಾಕರವರ್ಣಿಯ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ ಸೋಮಣ್ಣ ಹೊಂಗಳ್ಳಿಯವರು ರತ್ನಾಕರವರ್ಣಿಯ ಕುರಿತ ಸ್ಥೂಲ ಅವಲೋಕನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ ಕುರಿಯನ್ ಅವರು ವಹಿಸಿಕೊಂಡರು. ಡಾ ಯೋಗೇಶ್ ಕೈರೊಡಿಯವರು ನಿರೂಪಿಸಿ, ಡಾ ಚಂದ್ರಶೇಖರ ಗೌಡ ಅವರು ಸ್ವಾಗತಿಸಿದರು. ಕುಮಾರಿ ಶ್ರೀದೇವಿ ಪ್ರಾರ್ಥಿಸಿದರು.


Spread the love