ಮೇ 1 ರಂದು JSS Private School ದುಬೈನಲ್ಲಿ ‘ಬಸವ ಜಯಂತಿ’ಯ ಆಚರಣೆ. 

Spread the love

ದುಬೈ: ಯು.ಎ.ಇ. ಬಸವ ಸಮಿತಿ ದುಬೈ ಹಾಗೂ Precious Parties & Entertainment Services LLC ಸಂಸ್ಥೆಯ ಸಹಯೋಗ ಹಾಗು ಪೂಜ್ಯ ಜಗದ್ಗುರು ಶ್ರೀ.ಶ್ರೀ.ಶ್ರೀ. ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿಗಳ ಆಶಿರ್ವಾದದಿಂದ ಆಯೋಜಿಸಿರುವ  ನೇ ಬಸವ ಜಯಂತಿ ಕಾರ್ಯಕ್ರಮ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಬಸವ ಸಾಹಿತ್ಯದ ಖ್ಯಾತ ಸಂಶೋಧಕ ಶ್ರೀ ರಮ್ಜಾನ್ ದರ್ಗಾ, ಪ್ರಪ್ರಥಮವಾಗಿ ಕೊಲ್ಲಿನಾಡಿಗೆ ಆಗಮಿಸಲಿದ್ದಾರೆ. ಮೂಲತಃ ವಿಜಯಪುರ  ಜಿಲ್ಹೆಯವರಾದ ಶ್ರೀಯುತರು ೧೯೭೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ MA ಪದವಿಯನ್ನು ಹಾಗು ೧೯೮೨ರಲ್ಲಿ ಮೈಸೂರ್ ವಿಶ್ವವಿದ್ಯಾಲಯದಿಂದ MAMM ಪದವಿ ಪಡೆದರು.

Invitation

೩೩ ವರ್ಷ “ಪ್ರಜಾವಾಣಿ” ದಿನಪತ್ರಿಕೆಯ ಉಪ ಸಂಪಾದಕರಾಗಿ, ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ  ಬಸವಾದಿ ಶರಣ ಸಾಹಿತ್ಯ ಕೇಂದ್ರದ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದಲ್ಲದೆ ಅಮೇರಿಕಾದ ಮೆರಿಲ್ಯಾಂಡ್ ನಲ್ಲಿ ಬಸವ ತತ್ವ ವ್ಯಾಖಾನಿಸಿ, ಬಸವ ಧರ್ಮದ ಪರಂಪರೆಯನ್ನು ಪಸರಿಸಿದ ಖ್ಯಾತಿ ಇವರದು. ಇವರೊಂದಿಗೆ ಹಾಸ್ಯದ ಹೊಳೆಯನ್ನು ಹರಿಸಲುಖ್ಯಾತ ಹಾಸ್ಯಭಾಷಣಕಾರ ಶ್ರೀ ಬಸವರಾಜ್ ಮಹಾಮನಿ  ಅವರೂ ಕಾರ್ಯಕಮಕ್ಕೆ ಆಗಮಿಸಲಿದ್ದಾರೆ. ಇವರ ಹಾಸ್ಯ ಹೂರಣ ಸವಿಯಲು ನಿಮ್ಮನ್ನೆಲ್ಲಾ ಆಹ್ವಾನಿಸುತ್ತಿದೇವೆ.

ನಗರದ ಶೇಖ್ ಜಾಯೆದ್ ರಸ್ತೆಯಲ್ಲಿರುವ ಜೆ.ಎಸ್.ಎಸ್. ಶಾಲೆಯ (ಗಲ್ಫ್ ನ್ಯೂಸ್ ಕಟ್ಟಡದ ಹಿಂಭಾಗ) ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ೯:೩೦ ಘಂಟೆಗೆ ಪೂಜೆ ನಂತರಶ್ರೀ. . ನಿ. ಪ್ರ. ಶ್ರ್ರಿ. ಗುರುಬಸವ ಮಹಾಸ್ವಾಮಿಗಳ ಆಶಿರ್ವಚನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.


Spread the love