ರಾಷ್ಟ್ರಪತಿ ಚುನಾವಣೆ: ಜಾತ್ಯಾತೀತ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ- ಎಸ್‍ಡಿಪಿಐ

Spread the love

ರಾಷ್ಟ್ರಪತಿ ಚುನಾವಣೆ: ಜಾತ್ಯಾತೀತ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ- ಎಸ್‍ಡಿಪಿಐ

ಬೆಂಗಳೂರು: ರಾಷ್ಟ್ರಪತಿಯಾಗಿ ಶ್ರೀ ರಾಮನಾಥ ಕೋವಿಂದರವರ ಆಯ್ಕೆ ಅಚ್ಚರಿ ತರುವಂತಹದ್ದೇನಲ್ಲ. ಆಡಳಿತದಲ್ಲಿರುವ ಎನ್.ಡಿ.ಎ ಬತ್ತಳಿಕೆಯಲ್ಲಿ ಅವರನ್ನ ಗೆಲ್ಲಿಸಿಕೊಳ್ಳುವಷ್ಟು ಮತಗಳು ಇದ್ದವು. ದೇಶದಲ್ಲಿ ಅರಾಜಕತೆಯಿಂದ ದಲಿತರು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ವರ್ಗಗಳು ಕೋಮುವಾದಿ ಕೇಸರಿ ಗೂಂಡಾಗಳಿಂದ ಭಯಪಡುತ್ತಿರುವ ಈ ಸಮಯದಲ್ಲಿ ಅವರು ಆಯ್ಕೆಯಾಗಿ ಬಂದಿದ್ದಾರೆ. ನೂತನ ರಾಷ್ಟ್ರಪತಿಗಳು ಸಂಘಪರಿವಾರದ ಕಟ್ಟರ್ ಅನುಯಾಯಿ ಆದರೂ ನಮ್ಮ ಸಂವಿಧಾನವನ್ನು ಅಕ್ಷರಶಃ ಮತ್ತು ತಾತ್ವಿಕವಾಗಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಅವರ ಮೇಲಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎ.ಸಯೀದ್‍ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಜಾತ್ಯಾತೀತ ಪಕ್ಷದ ಸದಸ್ಯರಿಂದ ಅಡ್ಡ ಮತದಾನ ವಾಗಿರುವುದು ಗಾಬರಿಗೊಳಿಸುವಂತಾಗಿದ್ದು, ಜಾತ್ಯಾತೀತ ಸಿದ್ದಾಂತವನ್ನು ಅಣಕಿಸುವಂತಾಗಿದೆ. ತಮ್ಮನ್ನು ತಾವು ಜಾತ್ಯಾತೀತರೆಂದು ಆತ್ಮವಂಚನೆ ಮಾಡಿಕೊಳ್ಳುತ್ತಿರುವಂತಹದ್ದಾಗಿದೆ. ಪಶ್ಚಿಮ ಬಂಗಾಳದಲ್ಲಿ 5 ಮಂದಿ ಅಡ್ಡ ಮತದಾನ ಮಾಡಿದ್ದಾರೆ. ಅವರು ತೃಣ ಮೂಲ ಕಾಂಗ್ರೆಸ್ ಅಥವಾ ಸಿಪಿಎಂ ನಿಂದ ಯಾರದರೂ ಆಗಿರಲು ಸಾದ್ಯ. ಹಾಗೆಯೇ ಉತ್ತರ ಪ್ರದೇಶದಲ್ಲಿ 8 ಜನ ಅವರು ಕಾಂಗ್ರೆಸ್/ಎಸ್.ಪಿ/ಎಡ ಪಂಥೀಯರಿಂದ ಯಾರದರೂ ಆಗಿರಬಹುದು. ಪಂಜಾಬ್ ನಲ್ಲಿ ಎಎಪಿಗೆ ಸೇರಿದ ಇಬ್ಬರು ಸಂಸದರು, ತ್ರಿಪುರದಲ್ಲಿ ಕಾಂಗ್ರೆಸ್/ ಎಡಪಂಥೀಯರಿಗೆ ಸೇರಿದ 7 ಜನ, ರಾಜಸ್ಥಾನದಲ್ಲಿ ಮತ್ತು ಗೋವದಲ್ಲಿ ತಲಾ 5ಮಂದಿ ಕಾಂಗ್ರೆಸ್ ನವರು, ಗುಜರಾತಿನಲ್ಲಿ ಕಾಂಗ್ರೆಸ್/ ಎನ್.ಸಿ.ಪಿ/ ಜೆಡಿಯುಗೆ ಸೇರಿದ 11 ಮಂದಿ ಅಡ್ಡಮತದಾನ ಮಾಡಿರುವುದು ಸ್ಪಷ್ಟವಿದೆ. ಈ ಪಟ್ಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ದೇಶದಾದ್ಯಂತ ಸುಮಾರು 116ಮಂದಿ ಎನ್.ಡಿ.ಎ ಪರವಾಗಿ ಅಡ್ಡಮತದಾನ ಮಾಡಿದ್ದಾರೆ ಎಂಬ ಅಂಶಗಳಿಂದ ಜಾತ್ಯಾತೀತ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯಾದ ಮೀರಾಕುಮಾರ್‍ರವರು ಜಾತ್ಯಾತೀತ ಸಿದ್ದಾಂತದ ಪರವಾಗಿ ದಮನಿತರು ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಪರವಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಹೇಳಿಕೆ ನೀಡುವುದಷ್ಟರಿಂದಲೇ ಉದ್ದೇಶ ಈಡೇರುವುದಿಲ್ಲ. ಆಧಿಕಾರದಲ್ಲಿದ್ದಾಗ ಅವರು ಜಾತ್ಯಾತೀತ ಸಿದ್ದಾಂತಕ್ಕೆ ಕಟಿಬದ್ದರಾಗಿ ದಮನಿತ ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಪರವಾಗಿ ಹೋರಾಟ ಮಾಡಿದ್ದರೆ ದೇಶಕ್ಕೆ ಈ ದುರಾವಸ್ಥೆ ಹಾಗೂ ಸರ್ವನಾಶದ ಸ್ಥಿತಿ ಬರುತ್ತಿರಲಿಲ್ಲ. ನಿಜವಾದ ಹೋರಾಟ ತಳಮಟ್ಟದಲ್ಲಿ ಆಗಬೇಕಾಗಿದೆ. ಈಗ ನಿರಾಶೆಯ ಸಮಯದಲ್ಲಿ ಈ ರೀತಿಯ ಹೇಳಿಕೆ ಕೊಟ್ಟು ಸುಮ್ಮನಾಗುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಅಂಚಿಗೆ ತಳ್ಳಲ್ಪಟ್ಟ ಹಾಗು ದಮನಿತ ಜನರು ಅನುಭವಿಸುತ್ತಿರುವ ಉಪಟಳಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿದ್ದಿಲ್ಲ. ಆದುದರಿಂದ ದೇಶದಲ್ಲಿರುವ ಎಲ್ಲಾ ಜಾತ್ಯಾತೀತ ಪಕ್ಷಗಳು, ಜಾತ್ಯಾತೀತತೆ ಹಾಗೂ ಬಹುಸಂಸ್ಕøತಿಯನ್ನು ರಕ್ಷಿಸುವ ಸ್ಪಷ್ಟ ಸಿದ್ದಾಂತಗಳ ಹಿನ್ನಲೆಯಲ್ಲಿ ತಮ್ಮ- ತಮ್ಮ ಪಕ್ಷಗಳನ್ನು ಪುನಃ ಸಂಘಟಿಸಬೇಕಾದ ತುರ್ತು ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.


Spread the love