“ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಸಮಾರೋಪ

Spread the love

“ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಸಮಾರೋಪ

ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, “ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಹಮ್ಮಿಕೊಂಡ ‘ಹೊಲಿಗೆ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭ’ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

“ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಸಂಚಾಲಕಿ ಶ್ರೀಮತಿ ಗೀತಾ ಸಿ. ಕಿಣಿ ಸ್ವಾಗತಿಸಿ ವರದಿ ನೀಡಿದರು. ದೇಶದ ಉದ್ದಗಲಕ್ಕೂ ವ್ಯಾಪಕವಾಗಿ ಶಾಖೆಗಳನ್ನು ಹೊಂದಿರುವ ಸಿಂಗರ್ ಹೊಲಿಗೆ ಯಂತ್ರಗಳ ಉಪಾಧ್ಯಕ್ಷ ನವದೆಹಲಿಯ ಆರ್. ಕೆ. ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಿಂಗರ್ ಹೊಲಿಗೆ ಯಂತ್ರಗಳ ಬಗ್ಗೆ ವಿವರಣೆ ನೀಡಿ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೂ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು.. ಮಂಗಳೂರು ಸೈಂಟ್ ಅಲೋಷಿಯಸ್ ಕಾಲೇಜಿನ ಡಿಪಾರ್ಟ್‍ಮೆಂಟ್ ಆಫ್ ಬಯೋ ಟೆಕ್ನಾಲಜಿ ಪ್ರೊಫೆಸರ ಸ್ಮಿತಾ ಹೆಗ್ಡೆ ಅಧ್ಯಕ್ಷತೆ ವಹಿಸಿ ಹೊಲಿಗೆ ತರಬೇತಿ ಕಾರ್ಯಗಾರದ ಬಗ್ಗೆ ತಿಳುವಳಿಕೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರ ಕೋಶಾಧಿಕಾರಿ ಬಿ. ಆರ್. ಭಟ್, ಮುಂಬಯಿ ಹಿರಿಯ ಉದ್ಯಮಿ ಶ್ರೀ ವಿನಸೆಂಟ್ ಮಥಾಯಸ್ ಉಪಸ್ಥಿತರಿದ್ದು ಶುಭ ಹಾರೈಸಿದರು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಅತಿಥಿ ಗಣ್ಯರು ಪ್ರಮಾಣ ಪತ್ರ ವಿತರಣೆ ಮಾಡಿ. ಹೊಲಿಗೆ ತರಬೇತಿ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಶಿಬಿರಾರ್ಥಿ ಸಂಜನಾ ಪೈ, ಶ್ವೇತಾ ಪೈ ಕಾರ್ಯಕ್ರಮ ನಿರೂಪಣೆ ಮಾಡಿದರು.ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಹಾಗೂ ವಿಶ್ವ ಕೊಂಕಣಿ ಕೇಂದ್ರ ಶ್ರೀ ಶಕ್ತಿ ಮಿಶನ್ ವತಿಯಿಂದ ಸ್ವ ಉದ್ಯೋಗ ನಡೆಸಲು 5 ಸಿಂಗರ್ ಹೊಲಿಗೆ ಯಂತ್ರಗಳನ್ನು ದೇಣಿಗೆ ನೀಡಲಾಯಿತು. ವಿಶ್ವ ಕೊಂಕಣಿ ಕೇಂದ್ರ ಉಪಾಧ್ಯಕ್ಷ ವೆಂಕಟೇಶ ಎನ. ಬಾಳಿಗಾ ಧನ್ಯವಾದ ಸಮರ್ಪಣೆ ಮಾಡಿದರು.


Spread the love