ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನÉ, ಜೀವನ ಪಾವನ: ವೀರೇಂದ್ರ ಹೆಗ್ಗಡೆ

Spread the love

ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನÉ, ಜೀವನ ಪಾವನ: ವೀರೇಂದ್ರ ಹೆಗ್ಗಡೆ

ಉಜಿರೆ: ನಮ್ಮ ದೇಹದಲ್ಲಿ ಆತ್ಮ ಇದ್ದರೆ ಶಿವ, ಇಲ್ಲದಿದ್ದರೆ ಅದು ಶವ. ನಿರಾಕಾರವಾದ ಪರಶಿವನ ಮಹಿಮೆ ಅಪಾರವಾಗಿದ್ದು ಪ್ರಾರ್ಥನೆ, ಧ್ಯಾನ, ವ್ರತೋಪಾಸನೆಯಿಂದ ಆತ್ಮ ಧ್ಯಾನದಿಂದ ಶಿವ ದರ್ಶನವಾಗುತ್ತದೆ. ಶಿವ ಕಾರುಣ್ಯದ ಫಲ ಅನುಭವಿಸಬಹುದು. ಶಿವ ಕ್ಷೇತ್ರದಲ್ಲಿ ಮೂಲ ಸಾನ್ನಿಧ್ಯವಿದೆ. ವಿಶೇಷ ಶಕ್ತಿ ಇದೆ. ಶಿವ ಕ್ಷೇತ್ರ ದರ್ಶನದಿಂದ ದೇಹ, ಮನಸ್ಸು ಪವಿತ್ರವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ನಡೆಯುವ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಕ್ತರ ಪಾಲಿಗೆ ಶಿವನು ಪರಮೇಶ್ವರನಾಗಿರುತ್ತಾನೆ. ಜೀವನ ಸಂಬಂಧವಾದ ದುಃಖವನ್ನು, ಕಷ್ಟಗಳನ್ನು ದೂರ ಮಾಡುವವನೇ ರುದ್ರ. ದೃಢ ಸಂಕಲ್ಪದೊಂದಿಗೆ ಶ್ರದ್ಧಾ, ಭಕ್ತಿಯಿಂದ ದೇವರ ಧ್ಯಾನ, ಆರಾಧನೆ ಮಾಡಿದರೆ ನಮಗೆ ಅಂತರಂಗ ದರ್ಶನವಾಗುತ್ತದೆ. ವೇದ ಪ್ರಿಯನೂ, ನಾದಪ್ರಿಯನೂ ಆದ ಶಿವನು ಭಕ್ತ ಪ್ರಿಯನಾಗಿರುತ್ತಾನೆ. ಶಿವ ರಾತ್ರಿಯಂದು ಪರಿಶುಧ್ಧ ಭಾವ ಮತ್ತು ಭಕ್ತಿಯಿಂದ ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಬಹುದು. ಬಾಹ್ಯ ಸೌಂದರ್ಯದ ಜೊತೆಗೆ ಅಂತರಂಗ ಸೌಂದರ್ಯಕ್ಕೂ ಮಹತ್ವ ನೀಡಿ ದೇವರು ಕೊಟ್ಟ ಅಮೂಲ್ಯ ಜೀವನವನ್ನು ಪಾವನವಾಗಿ ಮಾಡಬೇಕು ಎಂದು ಅವರು ಹೇಳಿದರು.
ಶ್ರದ್ಧೆಯಿಂದ ಶ್ರಮವಿಲ್ಲ. ನಂಬಿಕೆಯಿಂದ ಸೋಲಿಲ್ಲ. ಭಕ್ತಿಯಿಂದ ಭಯವಿಲ್ಲ ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಪಾದಯಾತ್ರಿಗಳು ಶಿಸ್ತಿನಿಂದ ಧ್ಯಾನ ಮಾಡುತ್ತಾ ಬರಬೇಕು ಎಂದು ಅವರು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.


Spread the love