ಸಾಂಕೇತಿಕ ದರದಲ್ಲಿ ಹಳೆಯ ಪುಸ್ತಕಗಳ ಮಾರಾಟ

Spread the love

ಸಾಂಕೇತಿಕ ದರದಲ್ಲಿ ಹಳೆಯ ಪುಸ್ತಕಗಳ ಮಾರಾಟ
ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಜ. 27ರಿಂದ 29ರವರೆಗೆ ಉಜಿರೆಯಲ್ಲಿ ನಡೆಯಲಿದ್ದು ‘ಹಳೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ’ ಈ ಸಮ್ಮೇಳನದ ವಿಶೇಷ ಆಕರ್ಷಣೆಯಾಗಲಿದೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಹೊಸ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ ಸಾಂಕೇತಿಕ ದರದಲ್ಲಿ ಹಳೆಯ ಪುಸ್ತಕಗಳ ಮಾರಾಟ ಈ ಸಾಹಿತ್ಯ ಸಮ್ಮೇಳನದ ಒಂದು ವಿಭಿನ್ನ ಯೋಜನೆಯಾಗಿದೆ. ಶ್ರೀ ಸಾಮಾನ್ಯರ ಮನೆಗಳಲ್ಲಿ ಸಾಕಷ್ಟು ಹಳೆಯ ಪುಸ್ತಕಗಳು ಸರಿಯಾದ ಸಂಗ್ರಹಣೆಯ ಕೊರತೆಯಿಂದಾಗಿ ನಾಶವಾಗಿ ಹೋಗುತ್ತಿವೆ. ಅದಕ್ಕಾಗಿ ತಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಈ ಮಳಿಗೆಗೆ ದಾನವಾಗಿ ನೀಡಿದಾಗ ಕೃತಿಯಲ್ಲಿ ಅಡಕವಾದ ಮೌಲ್ಯಗಳು ಇತರರಿಗೆ ಹಂಚಲ್ಪಡುತ್ತದೆ. ಇದರಿಂದ ಆ ಸಾಹಿತ್ಯಗಳಿಗೂ ಒಂದು ಸಾರ್ಥಕ್ಯ ಭಾವ ಒದಗಿದಂತಾಗುತ್ತದೆ ಎಂಬುದು ಈ ಯೋಜನೆಯ ಆಶಯ.

ಕರ್ನಾಟಕ ವಿಧಾನಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿಸೋಜ ಈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಪುಸ್ತಕಗಳು, ನಿಯತಕಾಲಿಕೆಗಳನ್ನು ಮಳಿಗೆಗೆ ದಾನವಾಗಿ ನಿಡುವ ಮೂಲಕ ಸಾಹಿತ್ಯಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.


Spread the love