ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ಅಧಿವೇಶನ

Spread the love

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ಅಧಿವೇಶನ

ಉಡುಪಿ: ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರ ಹಾಗೂ ಧರ್ಮರಕ್ಷಣೆಗಾಗಿ ಮತ್ತು ಹಿಂದೂ ರಾಷ್ಟ್ರ ಸಾ ್ಥ ಪನೆಗಾಗಿ ಎಲ್ಲಾ ರಾಜ್ಯಗಳಲ್ಲಿನ ಹಿಂದುತ್ವವಾದಿ ಸಂಘಟನೆಗಳು, ಹಿಂದುತ್ವವಾದಿ ವಿಚಾರವಂತರು, ನ್ಯಾಯವಾದಿಗಳು ಹಾಗೂ ನಿಯತಕಾಲಿಕೆಗಳ ಸಂಪಾದಕರನ್ನು ಸೇರಿಸಿಕೊಂಡು ಕಳೆದ 5 ವರ್ಷಗಳಿಂದ ಅಖಿಲ ಭಾರತ ಮಟ್ಟದಲ್ಲಿ ಮತ್ತು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಹಿಂದೂ ಆಧಿವೇಶನಗಳನ್ನು ಆಯೋಜಿಸುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ಸುಮಾರು 5 ದೇಶಗಳ, 25 ರಾಜ್ಯಗಳ 250 ಸಂಘಟನೆಗಳು ಮತ್ತು 400 ಕ್ಕಿಂತಲೂ ಅಧಿಕ ಹಿಂದುತ್ವವಾದಿಗಳು ಭಾಗವಹಿಸುತ್ತಿದ್ದಾರೆ.

hindu-adhiveshana

ಹಿಂದೂ ಧರ್ಮದ ಮೇಲೆ ನಿರಂತರವಾಗಿ ಆಗುತ್ತಿರುವ ಆಘಾತಗಳು ಉದಾ. ಗೋಹತ್ಯೆ, ಮತಾಂತರ, ಲವ್‍ಜಿಹಾದ್, ಹಿಂದೂ ಕಾರ್ಯಕರ್ತರು ಮತ್ತು ಮುಖಂಡರ ಹತ್ಯೆ ಪ್ರಕರಣಗಳು, ದೇವಸಾ ್ಥ ನಗಳ ಸರಕಾರಿಕರಣ, ಹಿಂದೂಗಳ ಪವಿತ್ರ ಗ್ರಂಥಗಳ ಅವಹೇಳನ, ಹಿಂದೂವಿರೋಧಿ ಮೌಡ್ಯ ನಿಷೇಧ ಕಾನೂನಿನ ಪ್ರಸ್ತಾಪ ಮುಂತಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವು ಈ ಅಧಿವೇಶನದ ಮೂಲಕ ಸಾಧ್ಯವಾಗುತ್ತಿದೆ.

2013, 2014, ಮತ್ತು 2015 ರಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ರಾಷ್ಟ್ರ ಸಾ ್ಥ ಪನೆಗಾಗಿ ರಾಜ್ಯ ಸ್ಥ ರೀಯ ಹಿಂದೂ ಅಧಿವೇಶನಗಳು ಜರುಗಿದವು. ಇದರಲ್ಲಿ ರಾಜ್ಯವ್ಯಾಪಿ ಎಲ್ಲಾ ಜಿಲ್ಲೆಗಳಿಂದ 50 ಕ್ಕೂ ಅಧಿಕ ಸಂಘಟನೆಗಳು, 200 ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು 500 ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಇದರ ನಿರ್ಣಯದಂತೆ ಜಿಲ್ಲೆಗಳಲ್ಲಿ ಜಿಲ್ಲಾ ಸ್ಥ ರೀಯ ಹಿಂದೂ ಅಧಿವೇಶನಗಳನ್ನು ಮಾಡಲಾಗಿತ್ತು. ಈ ವರ್ಷ ಪ್ರಾಂತೀಯ ಮತ್ತು ಜಿಲ್ಲಾಮಟ್ಟದ ಹಿಂದೂ ಆಧಿವೇಶನಗಳನ್ನು ಮಾಡುವ ಆಯೋಜನೆಯಾಗಿದೆ. ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಾಂತೀಯ ಮಟ್ಟದ ಅಧಿವೇಶನವನ್ನು ದಿನಾಂಕ 11.12.2016 ರಂದು ಮಣಿಪಾಲದ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದರ ಉದ್ಘಾಟನೆಯು ಬೆ. 10.30 ಕ್ಕೆ ಸರಿಯಾಗಿ ನಡೆಯಲಿದೆ. ಈ ಆಧಿವೇಶನಕ್ಕೆ ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಳಿದ ಸ್ಥ ಳಗಳಿಂದಲೂ ಹಿಂದುತ್ವವಾದಿಗಳು ಆಗಮಿಸಲಿದ್ದಾರೆ. ಇದರಲ್ಲಿ ಪ್ರಮುಖ ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು, ಹಿಂದುತ್ವನಿಷ್ಠ ಯುವಕರು, ನ್ಯಾಯವಾದಿಗಳು ಸೇರಿದಂತೆ 100 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.


Spread the love