ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ : -ಶೇಖರ್ ಅಂಚನ್

ಉದ್ಯಾವರ: ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಅವರ ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ.ವಾರ್ಷಿಕೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆÉ. ಹಾಗಾಗಿ ಸ್ವಲ್ಪ ಶ್ರಮವೆನಿಸಿದರೂ ಶಿಕ್ಷಕರ ಮತ್ತು ಹೆತ್ತವರು ಒಂದು ಶಾಲೆಯಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ ನಡೆಯುವಂತೆ ನೋಢಿ ಕೊಳ್ಳ ಬೇಕು ಎಂದು ಕಟಪಾಡಿ ಎಸ್.ವಿ.ಎಸ್.ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಮುಖ್ಯಶಿಕ್ಷಕ ಮತ್ತು ನಿಡಂಬೂರು ಸಮಾಜ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಶೇಖರ್ ಅಂಚನ್ ಅವರು ಉದ್ಯಾವರ ಸರಕಾರಿ ಪ.ಪೂ. ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಪೂರ್ವಾಹ್ನ ಜರಗಿದ ದ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

udyavara

ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿಶೇಖರ್ ದ್ವಜಾರೋಹಣ ಗೈದು ಶುಭ ಹಾರೈಸಿದರು.ಅದ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾದ್ಯಕ್ಷರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ರವರು ಮಾತನಾಡುತ್ತಾ 54 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಈ ಶಾಲೆ ಮುಚ್ಚಿ ಹೋಗದಂತೆ ಸಮಾಜ ನೋಡಿ ಕೊಳ್ಳ ಬೇಕು. ಎಷ್ಟೋ ಖಾಸಗಿ ಶಾಲೆಗಳಲ್ಲಿ ಇರದ ಸೌಲಭ್ಯಗಳನ್ನು ನಮ್ಮ ಸಂಸ್ಥೆ ಹೊಂದಿದ್ದರೂ ವಿದ್ಯಾರ್ಥಿಗಳು ನಗರದತ್ತ ಮುಖ ಮಾಡುತ್ತಿರುವುದು ವಿಷಾದಕರ ಎಂದರು.

ಮುಖ್ಯ ಅತಿಥಿಗಳಾಗಿ ರೋಟರಿ ಅಧ್ಯಕ್ಷ ಶ್ರೀ ಕೆ.ಟಿ.ನಾಯಕ್, ಜೇಸಿ ಅಧ್ಯಕ್ಷ ಶ್ರೀ ಜಗದೀಶ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ್ ಬೊಳ್ಜೆ ಮತ್ತು ಜಿತೇಂದ್ರ ಶೆಟ್ಟಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ಸಾಂಸ್ಕøತಿಕ ಸ್ಪರ್ಧಾ ವಿಜೇತರ ಪಟ್ಟಿಯನ್ನು ಉಪನ್ಯಾಸಕಿ ಜ್ಯೋತಿಲಕ್ಷ್ಮೀ ಮತ್ತು ಕ್ರೀಡಾ ವಿಜೇತರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ ನಾಯಕ್ ವಾಚಿಸಿದರು. ಪ್ರಾಂಶುಪಾಲ ಮಹೇಂದ್ರ ಎನ್.ಶರ್ಮಾ ಮತ್ತು ಶಿಕ್ಷಕ-ರಕ್ಷಕ ಸಂಘದ ಅದ್ಯಕ್ಷ ರಮೇಶ್ ಆಚಾರ್ಯ ವೇಧಿಕೆಯಲ್ಲಿದ್ದರು.
ಪ್ರೌಢ ಶಾಲಾ ಮುಖ್ಯಸ್ಥೆ ಶ್ರೀಮತಿ ದಯಾವತಿ ಸ್ವಾಗತಿಸಿದರು. ಶಿಕ್ಷಕಿ ಜಯತಂತ್ರಿ ವಂದಿಸಿದರು. ಶಿಕ್ಷಕಿ ಪ್ರಭಾ ಬಿ. ಕಾರ್ಯ ನಿರೂಪಿಸಿದರು. ಬಳಿಕ ಕರಾಟೆ ಶಿಕ್ಷಕ ಸಂತೋಷ್ ಕುಮಾರ್ ಬೊಳ್ಜೆಯವರಿಂದ ತರಬೇತಾದ ಪ್ರೌಢಶಾಲಾ ವಿದ್ಯಾರ್ಥೀನಿಯರು ರೋಚಕ ಕರಾಟೆ ಪ್ರದರ್ಶನ ನೀಡಿದರು.

Leave a Reply