ಕಡಂಬಿಲಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ

ಬೆಳ್ತಂಗಡಿ: ಉಜಿರೆಯ ಕಡಂಬಿಲದ ಧರ್ಣಪ್ಪ ಗೌಡರ ಹರ್ಷನಿಕೇತನ ನಿವಾಸದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರು ಉಪಸ್ಥಿತರಿದ್ದರು.

belthangadi-swamiji29032016

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದದವರಿಗೆ ಹಾಗೂ ಅಲಂಕಾರ ಮಾಡಿದ ಉಜಿರೆ ಗ್ರಾಮ ಸಮಿತಿಯ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಸಹನಾ ಮೂಲೆಮಜಲು ಅವರ ಪ್ರಾರ್ಥನೆಯೊಂದಿಗೆ ಜರುಗಿನದ ಕಾರ್ಯಕ್ರಮ ಧರ್ಣಪ್ಪ ಗೌಡ ಸ್ವಾಗತಿಸಿದರು. ಗೋಪಾಲಕೃಷ್ಣ ಗೌಡ ಧನ್ಯವಾದವಿತ್ತರು..
ಧರ್ಣಪ್ಪ ಗೌಡ ಹಾಗೂ ಅವರ ಕುಟುಂಬಸ್ಥರು ಸ್ವಾಮೀಜಿಯವರನ್ನು ಸ್ವಾಗತಿಸಿದರು.
ಸಹನಾ ಮೂಲೆಮಜಲು ಅವರ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply