ಅಂಬೇಡ್ಕರ್ ಸರ್ವ ಏಳಿಗೆಗೆ ದುಡಿದ ನಾಯಕ; ಪ್ರಮೋದ್ ಮಧ್ವರಾಜ್

Spread the love

ಅಂಬೇಡ್ಕರ್ ಸರ್ವ ಏಳಿಗೆಗೆ ದುಡಿದ ನಾಯಕ; ಪ್ರಮೋದ್ ಮಧ್ವರಾಜ್

ಉಡುಪಿ: ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ನಡೆದ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್‍ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಭಾರತದ ಸರ್ವ ಜನತೆಯ ಪವಿತ್ರ ಗ್ರಂಥವಾದ ಸಂವಿಧಾನದ ನಿರ್ಮಾತೃ ಡಾ| ಅಂಬೇಡ್ಕರ್‍ರವರು ಕೇವಲ ದಲಿತರಿಗೆ ಮಾತ್ರ ನಾಯಕರಾಗದೆ ಸರ್ವ ಜನರ ಏಳಿಗೆಗಾಗಿ ದುಡಿದು ಎಲ್ಲಾ ವರ್ಗಗಳ ಮುಖಂಡರಾಗಿ ಹೊರಹೊಮ್ಮಿದವರು. ದೇಶದಲ್ಲಿರುವ ಶೇ. 80ರಷ್ಟು ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಿರುವುದಲ್ಲದೆ, ಎಲ್ಲಾ ವರ್ಗಗಳಿಗೂ ಸಮಾನವಾಗಿ ಅವಕಾಶವನ್ನು ನೀಡಿ ಜನ ನಾಯಕನಾಗಿ ಬೆಳೆದವರು ಎಂದು ಮಾನ್ಯ ಉಸ್ತುವಾರಿ ಸಚಿವರು ನಮ್ಮ ದೇಶದ ಸಂವಿಧಾನಕ್ಕೆ ಡಾ| ಅಂಬೇಡ್ಕರ್‍ರವರು ಕೊಟ್ಟ ಕೊಡುಗೆಯನ್ನು ನೆನಪಿಸಿಕೊಂಡರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ, ಪ್ರಖ್ಯಾತ್ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಯತೀಶ್ ಕರ್ಕೇರ, ಕೇಶವ ಎಂ. ಕೋಟ್ಯಾನ್, ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಅಮೀನ್ ಪಡುಕರೆ, ನಿತ್ಯಾನಂದ ಶೆಟ್ಟಿ ಹಾರಾಡಿ, ಅಶೋಕ್ ಕುಮಾರ್ ಶೆಟ್ಟಿ ಕರ್ಜೆ, ಗಣೇಶ್ ನೆರ್ಗಿ, ಮೀನಾಕ್ಷೀ ಮಾಧವ ಬನ್ನಂಜೆ, ಸಂಧ್ಯಾ ತಿಲಕ್‍ರಾಜ್, ರಫೀಕ್ ಕರಂಬಳ್ಳಿ, ನವೀನ್ ಶೆಟ್ಟಿ, ಪ್ರಶಾಂತ್ ಪೂಜಾರಿ, ವೆರೋನಿಕಾ ಕರ್ನೇಲಿಯೋ, ಚಂದ್ರಿಕಾ ಶೆಟ್ಟಿ, ಡಾ| ಸುನಿತಾ ಕೊಕ್ಕರ್ಣೆ, ಅಮೃತ್ ಶೆಣೈ, ಕೆ.ಪಿ. ಇಬ್ರಾಹಿಂ, ಗೋಪಿ ನಾಯ್ಕ್, ಉಮೇಶ್ ನಾಯ್ಕ್, ನಾರಾಯಣ್ ಕುಂದರ್, ಅಫ್ತಬ್, ಹರ್ಮಿಸ್ ನೊರೋನ್ಹ, ಅನಂತ್ ನಾಯ್ಕ್, ಭಾಸ್ಕರ್ ರಾವ್ ಕಿದಿಯೂರ್, ಶಶಿರಾಜ್ ಕುಂದರ್, ಧನಂಜಯ್ ಕುಂದರ್, ಶೋಭಾ ಪೂಜಾರಿ, ಚಂದ್ರಕಾಂತ್ ನಾಯಕ್, ಉಪಸ್ಥಿತರಿದ್ದರು. ಜನಾರ್ದನ ಭಂಡಾರ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.


Spread the love