ಅಕ್ಟೋಬರ್ 18ರಂದು ಕಣಜಾರು ಚರ್ಚ್ ವತಿಯಿಂದ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ

Spread the love

ಅಕ್ಟೋಬರ್ 18ರಂದು ಕಣಜಾರು ಚರ್ಚ್ ವತಿಯಿಂದ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ

ಉಡುಪಿ: ಕಣಜಾರು ಲೂಡ್ರ್ಸ್ ದೇವಾಲಯದ ಪಾಲನಾ ಮಂಡಳಿ ಹಾಗೂ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ವತಿಯಿಂದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ ಅಕ್ಟೋಬರ್ 18ರಂದು ಕಣಜಾರಿನ ರಂಗನಪಲ್ಕೆಯಲ್ಲಿರುವ ದಿ|ಪಿ ಎಮ್ ಸಲ್ಡಾನಾ ಮೆಮೋರಿಯಲ್ ಕೌಡೂರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ಧರ್ಮಪ್ರಾಂತ್ಯ ವ್ಯಾಪ್ತಿಯ ಎಲ್ಲಾ ಚರ್ಚುಗಳು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಈ ಕ್ರೀಡಾ ಕೂಟ ಸಹಕಾರಿಯಾಗಲಿದೆ. ಕ್ರೀಡಾ ಕೂಟದಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯ ವ್ಯಾಪ್ತಿಯ 52 ಚರ್ಚುಗಳು ಕ್ರೀಡಾಪಟುಗಳಿಗೆ ಭಾಗವಹಿಸಲು ಅವಕಾಶವಿದೆ.

ಕ್ರೀಡಾಕೂಟದಲ್ಲಿ ಸುಮಾರು 1500ಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸಲಿದ್ದು, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರೀಡೆಗಳು ಒಟ್ಟು ಎರಡು ವಿಭಾಗಳಲ್ಲಿ ಅಂದರೆ 15 ವರ್ಷ ಮತ್ತು 20 ವರ್ಷ ಎಂಬ ಎರಡು ವಿಭಾಗಳಲ್ಲಿ ನಡೆಯಲಿದೆ. ಟ್ರ್ಯಾಕ್ ಇವೆಂಟ್‍ಗಳಾದ 100 ಮೀಟರ್, 200ಮೀಟರ್, 800ಮೀಟರ್ ಮತ್ತು 1500 ಮೀಟರ್ ಒಟ, ಮಾತ್ರವಲ್ಲದೆ ಫೀಲ್ಡ್ ಇವೆಂಟ್‍ಗಳಾದ ಶಾಟ್ ಪುಟ್, ಡಿಸ್ಕಸ್ ತ್ರೋ, ಲಾಂಗ್ ಜಂಪ್, ಹೈಜಂಪ್ ಸ್ಪರ್ಧೆಗಳು ನಡೆಯಲಿದೆ.

ಒಂದು ಚರ್ಚಿನಿಂದ ಎಷ್ಟೂ ಮಂದಿ ಕೂಡ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಒಬ್ಬ ಸ್ಪರ್ಧಾಳು ಗರಿಷ್ಠ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಇದಲ್ಲದೆ ಪುರಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೋಬಾಲ್ ಸ್ಪರ್ಧೆಗಳು ಕೂಡ ನಡೆಯಲಿದ್ದು ವೈಯುಕ್ತಿಕ ಚಾಂಪಿಯನ್‍ಶಿಪ್ ಮತ್ತು ತಂಡ ಚಾಂಪಿಯನ್‍ಶಿಪ್ ಬಹುಮಾನ ನೀಡಲಾಗುವುದು ಎಂದು ಚರ್ಚಿನ ಧರ್ಮಗುರುಗಳಾದ ವಂ ಅಲೆಗ್ಸಾಂಡರ್ ಲೂವಿಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಎಡಿಸನ್ ಸಲ್ಡಾನ 9535482006 ಅಧ್ಯಕ್ಷರು ಐಸಿವೈಎಮ್ ಸಂಪರ್ಕಿಸಲು ಕೋರಲಾಗಿದೆ.


Spread the love