ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 623 ಲೋಡ್‌ ಮರಳು ವಶ

Spread the love

ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 623 ಲೋಡ್‌ ಮರಳು ವಶ

ಬೀಟ್‌ ಸಿಬ್ಬಂದಿಯ ಖಚಿತ ಮಾಹಿತಿಯ ಮೇರೆಗೆ ಕಂದಾವರ, ಬಡಗುಳಿಪ್ಪಾಡಿ, ಮೂಡುಪೆರಾರೆ ಗ್ರಾಮಗಳಲ್ಲಿ ದಾಳಿ ಮಾಡಿರುವ ಬಜ್ಪೆ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 623 ಲೋಡ್‌ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಆರು ಕಡೆಗಳಲ್ಲಿ ಈ ಮರಳನ್ನು ಸಂಗ್ರಹಿಸಿರುವುದು ಕಂಡು ಬಂದಿದ್ದು, ಮರಳನ್ನು ವಶಪಡಿಸಿಕೊಂಡು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಎಸಿಪಿ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಬಜ್ಪೆ ಇನ್‌ಸ್ಪೆಕ್ಟರ್‌ ಎಸ್. ಪರಶಿವಮೂರ್ತಿ, ಸಿಬ್ಬಂದಿ ಪೂವಪ್ಪ, ಜಗದೀಶ್, ರಾಜೇಶ್, ಕಿಷ್ಟಪ್ಪ ರಾಥೋಡ್, ಅಬ್ಬುಸಾಲಿ, ಕುಮಾರ್ ಸ್ವಾಮಿ,. ಚಂದ್ರಶೇಖರ್, ಎಚ್.ಜಿ. ಬಾಷಾ ಹಾಗೂ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.


Spread the love