ಅಕ್ರಮ ಕೋಳಿ ಅಂಕಕ್ಕೆ ಧಾಳಿ: 6 ಸೆರೆ, 29 ಕೋಳಿ ವಶ

Spread the love

ಕೋಳಿ ಅಂಕಕ್ಕೆ ಧಾಳಿ: 6 ಸೆರೆ, 29 ಕೋಳಿ ವಶ

ಮಂಗಳೂರು : ಬಜ್ಪೆ ಮುಳಿಯ ನೇರಳಪದವು  ಎಂಬಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಬಜ್ಪೆ  ಪೊಲೀಸರು ಶುಕ್ರವಾರ ಧಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ 6 ಮಂದಿಯನ್ನು ಬಂಧಿಸಿ 29ಕೋಳಿಗಳನ್ನು ವಶ ಪಡಿಸಿದ್ದಾರೆ.

ಖಚಿತ ವತ೯ಮಾನದ ಮೇರೆಗೆ‌ ಬಜ್ಪೆ  ಠಾಣಾಧಿಕಾರಿ   ಮತ್ತು ಸಿಬ್ಬಂದಿಗಳು ಈ ಧಾಳಿ ಕಾಯಾ೯ಚರಣೆ ನಡೆಸಿದ್ದಾರೆ.

ಕೋಳಿ ಅಂಕಕ್ಕೆ ಬಳಸಿದ್ದ  23 ಕೋಳಿ ಹಾಗೂ ಬಾಲನ್ನು ಧಾಳಿಯ ವೇಳೆ ವಶಪಡಿಸಲಾಗಿದೆ.


Spread the love