ಅಕ್ರಮ ಮರಳುಗಾರಿಕೆಗೆ ದಾಳಿ – ಸೊತ್ತುಗಳ ವಶ

ಅಕ್ರಮ ಮರಳುಗಾರಿಕೆಗೆ ದಾಳಿ – ಸೊತ್ತುಗಳ ವಶ

ಮಂಗಳೂರು : ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಫಲ್ಗುಣಿ ನದಿಯಿಂದ ಕಬ್ಬಿಣದ ದೋಣಿ ಮೂಲಕ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬಜಪೆ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ತೆಗೆಯುತ್ತಿದ್ದ ಮರಳನ್ನು ಹಾಗೂ ಈ ಮರಳುಗಾರಿಕೆಗೆ ತೊಡಗಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ದಾಳಿಯ ವೇಳೆ ಪೂರ್ತಿ ಮರಳು ತುಂಬಿದ ಕಬ್ಬಿಣದ ದೋಣಿ-1, ಅಲ್ಪಸ್ವಲ್ಪ ಮರಳು ತುಂಬಿದ ಕುರುವ ಕಬ್ಬಿಣದ ದೋಣಿ-1, ಡ್ರೇಜಿಂಗ ಯಂತ್ರವನ್ನು ಅಳವಡಿಸಲು ತಂದಿರುವ ಕೆಂಪು ಬಣ್ಣದ ಕಬ್ಬಿಣದ ದೋಣಿ-1 ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತಿನ ಅಂದಾಜು ಒಟ್ಟು ಮೌಲ್ಯ-5 ಲಕ್ಷ ರೂ ಆಗಿರುತ್ತದೆ

ಈ ಕಾರ್ಯಾಚರಣೆಯನ್ನು ಮಂಗಳೂರು ಉತ್ತರ ಉಪ – ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಇವರ ಮಾರ್ಗದರ್ಶನದಲ್ಲಿ ಎಸ್.ಪರಶಿವಮೂರ್ತಿ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರಾದ ಶಂಕರ ನಾಯರಿ ಪೊಲೀಸ್ ಉಪನಿರೀಕ್ಷಕರು, ಎ.ಎಸ್.ಐ ಪೂವಪ್ಪ. ಠಾಣಾ ಸಿಬ್ಬಂದಿಗಳಾದ ರಾಜೇಶ್, ಅಭಿಷೇಕ್ ಪೂಜಾರಿ ಲಕ್ಷ್ಮಣ್ ಕಾಂಬಳೆ. ಹರಿಪ್ರಸಾದ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪದ್ಮಶ್ರೀ ,ಕಂದಾಯ ಇಲಾಖೆಯ ನಿರೀಕ್ಷಕರಾದ ಆಸಿಪ್ ಮತ್ತು ಗ್ರಾಮ ಕರಣಿಕರಾದ ಕು|| ಪ್ರಮೀಳಾ ರವರು ಭಾಗಿಯಾಗಿರುತ್ತಾರೆ.