ಅಖಿಲ ಭಾರತ ಮಟ್ಟಕ್ಕೆ ಮಂಗಳೂರು ವಿ.ವಿ ಪುರುಷರ ಹ್ಯಾಂಡ್‍ಬಾಲ್ ತಂಡ 

Spread the love

ಅಖಿಲ ಭಾರತ ಮಟ್ಟಕ್ಕೆ ಮಂಗಳೂರು ವಿ.ವಿ ಪುರುಷರ ಹ್ಯಾಂಡ್‍ಬಾಲ್ ತಂಡ 

ಮಂಗಳೂರು : ಡಿಸೆಂಬರ್ 21 ರಿಂದ 24ರವರೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪುರುಷರ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಜಯಶಾಲಿಯಾಗಿರುತ್ತದೆ. ಮೊದಲ ಪಂದ್ಯದಲ್ಲಿ ಗೀತಮ್ ವಿಶ್ವವಿದ್ಯಾನಿಲಯದ ಎದುರು 28-17, ಎರಡನೇ ಪಂದ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಢದ ಎದುರು 28-8, ಮೂರನೇ ಪಂದ್ಯದಲ್ಲಿ ಕಾಕತೀಯ ವಿಶ್ವವಿದ್ಯಾನಿಲಯದ ಎದುರು 23-17 ಅಂತರದಲ್ಲಿ ಜಯಗಳಿಸಿದೆ.

ಮೊದಲ ಫ್ರಿ. ಕ್ವಾರ್ಟರ್ ¥sóÉೈನಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಭಾರತೀಯಾರ್ ವಿಶ್ವವಿದ್ಯಾನಿಲಯದ ಎದುರು 20-21 ಅಂತರಗಳಿಂದ ಜಯಿಸಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದೆ.

ನಂತರ ನಡೆದ ಲೀಗ್ ಪಂದ್ಯಾವಳಿಗಳಲ್ಲಿ ಕೃಷ್ಣ ವಿಶ್ವವಿದ್ಯಾನಿಲಯದ ಎದುರು 31-24, ಎರಡನೇ ಲೀಗ್ ಪಂದ್ಯದಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಎದುರು 25-34, ಮೂರನೇ ಲೀಗ್ ಪಂದ್ಯಾವಳಿಯಲ್ಲಿ ಕಾರ್ಪಗಮ್ ಅಕಾಡೆಮಿ ಆಫ್ ಹೈಯರ್ ಎಡುಕೇಶನ್ ಎದುರು 24-34 ಗೋಲುಗಳಿಂದ ತೃತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಪಡೆದಿರುತ್ತದೆ. ತಂಡದ ತರಬೇತುದಾರರಾಗಿ ತಂಡದೊಂದಿಗೆ ರಾಜೇಂದ್ರ ಬಾಬು ಹಾಗೂ ವವಸ್ಥಾಪಕರಾಗಿ ಸುದೀನ ಇವರು ತೆರಳಿರುತ್ತಾರೆ.


Spread the love