ಅಗಸ್ಟ್ 14 : ಉಡುಪಿ ಜಿಲ್ಲೆಯಲ್ಲಿ 322 ಮಂದಿಗೆ ಕೊರೋನಾ ಪಾಸಿಟಿವ್, 2262 ನೆಗೆಟಿವ್

Spread the love

ಅಗಸ್ಟ್ 14 : ಉಡುಪಿ ಜಿಲ್ಲೆಯಲ್ಲಿ ; 322 ಮಂದಿಗೆ ಕೊರೋನಾ ಪಾಸಿಟಿವ್, 2262 ನೆಗೆಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 322 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7490 ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 2369 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಶುಕ್ರವಾರ 2262 ವರದಿಗಳು ನೆಗೆಟಿವ್ ಬಂದಿದ್ದು, 322 ಪಾಸಿಟಿವ್ ಬಂದಿವೆ. 1640 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಶುಕ್ರವಾರ 614 ಮಂದಿ ಗುಣಮುಖರಾಗಿದ್ದು ಇದುವರೆಗೂ 4872 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2550 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಕೋರೊನಾದಿಂದ ಶುಕ್ರವಾರ 5 ಸಾವು ಸಂಭವಿಸಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 75ಮಂದಿ ಸಾವನಪ್ಪಿದ್ದಾರೆ


Spread the love