ಅಗುಂಬೆ ಘಾಟ್​​ನ ಏಳನೇ ತಿರುವಿನಲ್ಲಿ  ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ಥ

Spread the love

ಅಗುಂಬೆ ಘಾಟ್​​ನ ಏಳನೇ ತಿರುವಿನಲ್ಲಿ  ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ಥ

ಶಿವಮೊಗ್ಗ: ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತೊಂದು ಅವಾಂತರ ಸೃಷ್ಟಿಸಿದೆ. ಸೊಲ್ಲಾಪುರ -ಶಿವಮೊಗ್ಗ -ಮಂಗಳೂರು ಸಂಚಾರ ದಟ್ಟಣೆ ಇರುವ ಹೆದ್ದಾರಿ ಆಗುಂಬೆ ಘಾಟ್​​ನ ಏಳನೇ ತಿರುವಿನಲ್ಲಿ ಮಣ್ಣು ಕುಸಿದಿದೆ.

ಹೆದ್ದಾರಿಯಲ್ಲಿ ಮಣ್ಣು ಕುಸಿದ ಪರಿಣಾಮ ಕೆಲ ಘಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಭಾರಿ ವಾಹನಗಳ ಸಂಚಾರ ನಿಷೇಧಿಸಿ ಮಣ್ಣು ತೆರವು ಮಾಡಲಾಗಿದೆ .

ತೀರ್ಥಹಳ್ಳಿ ಬಳಿ ತುಂಗಾ ನದಿ ನೀರು ಹೆಚ್ಚಾಗಿದ್ದು, ರಾಮ ಮಂಟಪ ಮುಳುಗಿದೆ. ಈ ಹಿನ್ನಲೆಯಲ್ಲಿ ಗಾಜನೂರು ತುಂಗಾ ಜಲಾಶಯದ ಗೇಟ್​ಗಳನ್ನ ತೆರೆಯಲಾಗಿದೆ.


Spread the love