Tuesday, January 22, 2019
Home Mangalorean News Kannada News ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸುವುದೇ ನಿಜವಾದ ದೀಪಾವಳಿ- ಬಿಷಪ್ ಜೆರಾಲ್ಡ್ ಲೋಬೊ

ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸುವುದೇ ನಿಜವಾದ ದೀಪಾವಳಿ- ಬಿಷಪ್ ಜೆರಾಲ್ಡ್ ಲೋಬೊ

Spread the love

ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸುವುದೇ ನಿಜವಾದ ದೀಪಾವಳಿ- ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದವನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ದೀಪಾವಳಿಯ ನಿಜವಾದ ಅರ್ಥ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಗುರುವಾರ ಉಡುಪಿ ಶೋಕ ಮಾತಾ ಇಗರ್ಜಿಯ ವಠಾರದಲ್ಲಿ ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ ಇವರುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಸರ್ವಧರ್ಮ ದೀಪಾವಳಿ ಆಚರಣೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು.

ಭಾರತದ ಸಂಸ್ಕøತಿಯಲ್ಲಿ ವಿಶಿಷ್ಟವಾದ ಹಲವು ಹಬ್ಬಗಳಿವೆ. ಸಾಂಸ್ಕೃತಿಕವಾಗಿ ಸಂಬಂಧಗಳನ್ನು ಒಗ್ಗೂಡಿಸುವ ಮತ್ತು ಉಳಿಸುವ ಪ್ರಯತ್ನ ಈ ಯಾಂತ್ರಿಕ ಜೀವನದಲ್ಲಿ, ಕನಿಷ್ಟ ಹಬ್ಬಗಳ ಮೂಲಕವಾದರೂ ಉದ್ದೀಪನಗೊಳಿಸುವ ದಿಸೆಯಲ್ಲಿ, ನಮ್ಮ ಸಂಸ್ಕೃತಿಯ ಕೊಡುಗೆ ಅಪಾರ. ಹಬ್ಬಗಳನ್ನು ನಾವು ಸಡಗರ-ಸಂಭ್ರಮದಿಂದ ಆಚರಿಸುತ್ತೇವಾದರೂ ಅವುಗಳ ಆಚರಣೆಯ ಹಿನ್ನೆಲೆಯ ಅರಿವು ಇಲ್ಲದೆ, ಬರಿಯೇ ಬಾಹ್ಯ ಆಚರಣೆಗಳ ಮೂಲಕ ಸಮಯವನ್ನು ಕಳೆದು, ಅಮೂಲ್ಯವಾದ ಸಾಂಸ್ಕೃತಿಕ ಆಚರಣೆಗಳ ಮಹತ್ವವನ್ನು ನಾವು ಬದಿಗೊತ್ತಿರುವುದು ವಾಸ್ತವಿಕ ಸಂಗತಿಯಾಗಿದೆ ಎಂದರು

ದೀಪಾವಳಿ – ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ದೀಪಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. `ತಮಸೋಮಾ ಜ್ಯೋತಿರ್ಗಮಯ’ ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯನ್ನು ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ. ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿಯಾಗಿದೆ. ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತು ಶ್ರದ್ಧೆಯಿಂದ ಆಚರಿಸಿದರೆ ಈ ಸಡಗರದ-ಸಂಭ್ರಮದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಎಂದರು.

ಮುಖ್ಯ ಅತಿಥಿಯಾಗಿ ಪ್ರಧಾನ ಭಾಷಣ ಮಾಡಿದ ಹೆಬ್ರಿ ಸರಕಾರಿ ಜ್ಯೂನಿಯರ್ ಕಾಲೇಜಿನ ಪ್ರಾಧ್ಯಾಪಕರಾದ ಸುಮಾ ಎಸ್ ಅವರು ಕೇವಲ ಒಂದು ಕೈಯಿಂದ ಸಮಾಜದಲ್ಲಿ ಶಾಂತಿಯನ್ನು ಬಯಸುವುದು ಅಸಾಧ್ಯ ಹೇಗೆ ಹಲವು ಹಣತೆಗಳು ಸೇರಿದ ಬೆಳಕಿನ ಪ್ರಕಾಶ ಹೆಚ್ಚುತ್ತದೋ ಅಂತೆಯೇ ಎಲ್ಲರೂ ಒಟ್ಟಾಗಿ ಸೇರಿದಾಗ ಮಾತ್ರ ನಿಜವಾದ ಶಾಂತಿಯ ಹಣತೆ ಹಚ್ಚಲು ಸಾಧ್ಯವಿದೆ. ಎಲ್ಲಾ ಕಡೆಯಲ್ಲೂ ಬೆಂಕಿಯೇ ಪಸರಿರುವ ಈ ದಿನಗಳಲ್ಲಿ ಪ್ರತಿಯೊಬ್ಬರು ಬೆಂಕಿಯುಗುಳುವ ಹಣತೆಯಾಗದೆ ಬೆಳಕು ನೀಡುವ ಹಣತೆಯಾಗೋಣ ಎಂದರು.

ಮಲ್ಪೆ ಯುಬಿಎಮ್ ಎಬನೇಜರ್ ಚರ್ಚಿನ ಪಾಸ್ಟರ್ ರೆ|ಸಂತೋಷ್ ಎ, ರಂಗಿನಕೆರೆ ನೂರುಲ್ ಹುದ ಮಸೀದಿಯ ಧರ್ಮಗುರು ಮೌಲಾನಾ ಮಹಮ್ಮದ್ ಶರ್ವಾಣಿ ರಜ್ವಿ, ಲಯನ್ಸ್ 317 ಸಿ ಇದರ ಜಿಲ್ಲಾ ಗವರ್ನರ್ ಲಯನ್ ಡಾ|ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

Members Login

Obituary

Congratulations

Do NOT follow this link or you will be banned from the site!
error: Content is protected !!