ಅಡ್ವೆ ಕಂಕಣ ಗುತ್ತು ಹರೀಶ್ ಶೆಟ್ಟಿ ನಿಧನ

Spread the love

ಅಡ್ವೆ ಕಂಕಣ ಗುತ್ತು ಹರೀಶ್ ಶೆಟ್ಟಿ ನಿಧನ

ಉಡುಪಿ: ಅಡ್ವೆ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಅಡ್ವೆ ಕಂಕಣ ಗುತ್ತು ಹರೀಶ್ ಶೆಟ್ಟಿ (63) ಅನಾರೋಗ್ಯದಿಂದ ಉಡುಪಿ ಆಸ್ಪತ್ರೆ ಯಲ್ಲಿ ಭಾನುವಾರ ನಿಧನರಾದರು.

ಕೋಣಗಳ ಯಜಮಾನ ಉಡುಪಿ ಚಿಟ್ಪಾಡಿ ದಿ. ಕೃಷ್ಣ ಶೆಟ್ಟಿ ಕೋಣಗಳ ಮೇಲುಸ್ತುವಾರಿ ನೋಡಿಕೊಂಡು ಅವರೊಂದಿಗೆ ಕಂಬಳ ಕ್ಷೇತ್ರದಲ್ಲಿ ಪಳಗಿ ಬಳಿಕ ತಾವೇ ಕೋಣಗಳನ್ನು ಸಾಕಿ ಯಜಮಾನನಾಗಿದ್ದುಕೊಂಡು ನಾಲ್ಕು ದಶಕಗಳಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು, ನಂದಿಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಸದಸ್ಯರಾಗಿ, ಯಶಸ್ವಿ ಉದ್ಯಮಿಯಾಗಿ ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ , ಪುತ್ರ, ಇಬ್ಬರು ಪುತ್ರಿಯರು , ಅಳಿಯಂದಿರು, ಮೊಮ್ಮಗ, ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.


Spread the love