ಅತ್ತಾವರ  ಫ್ಲ್ಯಾಟ್‌ನಿಂದ ನಗ-ನಗದು ಕಳವುಗೈದ ಆರೋಪಿ ಸೊತ್ತು ಸಹಿತ ಸೆರೆ

ಅತ್ತಾವರ  ಫ್ಲ್ಯಾಟ್‌ನಿಂದ ನಗ-ನಗದು ಕಳವುಗೈದ ಆರೋಪಿ ಸೊತ್ತು ಸಹಿತ ಸೆರೆ

ಮಂಗಳೂರು: ಅತ್ತಾವರದ ವಸತಿಗೃಹವೊಂದರ ಮನೆಯಿಂದ ನಗ-ನಗದು ಸಹಿತ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜೆಪ್ಪುವಿನ ಸೈಂಟ್ ಜೋಸೆಫ್ ನಗರ ನಿವಾಸಿ ನಿಶಾನ್ ಸೂರಜ್ ಮಿನೇಜಸ್(28) ಬಂಧಿತ ಆರೋಪಿ. ಈತನಿಂದ ಸುಮಾರು 12 ಗ್ರಾಂ ತೂಕದ ಚಿನ್ನಾಭರಣ, ಲ್ಯಾಪ್ ಟಾಪ್, ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್ ಸಹಿತ ಒಟ್ಟು ಸುಮಾರು 1.15 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅತ್ತಾವರದ ರೋಶನಿ ಅಪಾರ್ಟ್‌ಮೆಂಟ್ ನಲ್ಲಿರುವ ಡಿಲ್ಸನ್ ಲೋಬೊ ಎಂಬವರ ಮನೆಯಿಂದ ಜೂ.28ರಂದು ಹಗಲಿನಲ್ಲಿ ಕಳ್ಳತನ ನಡೆದಿತ್ತು. ಫ್ಲ್ಯಾಟ್‌ನಲ್ಲಿದ್ದ ಸುಮಾರು 18 ಗ್ರಾಂ ತೂಕದ ವಿವಿಧ ನಮೂನೆಯ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್ ಫೋನ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಹಾಗೂ ವಾಚ್ ಸಹಿತ ಒಟ್ಟು 1,53,000 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದವು. ಈ ಮನೆ ಬಗ್ಗೆ ಡಿಲ್ಸನ್ ನೀಡಿರುವ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.