ಅತ್ಯಾಚಾರ ಆರೋಪ ಪ್ರಕರಣ; ಆರೋಪಿ ಉಮೇಶ್ ಸಾಲ್ಯಾನ್ ಖುಲಾಸೆ

Spread the love

ಅತ್ಯಾಚಾರ ಆರೋಪ ಪ್ರಕರಣ; ಆರೋಪಿ ಉಮೇಶ್ ಸಾಲ್ಯಾನ್ ಖುಲಾಸೆ

ಮಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ರವರನ್ನು ಖುಲಾಸೆಗೊಳಿಸಿ, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2019ರಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ಎಂಬುವರು ಬಸ್ಸಿನಲ್ಲಿ ಚಾಲಕ ಕೆಲಸ ಮಾಡಿಕೊಂಡಿರುವಾಗ ಪಿರ್ಯಾದಿದಾರರನ್ನು ಪರಿಚಯಿಸಿಕೊಂಡು ಆತ್ಮೀಯತೆಯಿಂದಿದ್ದು, ನಂತರದ ದಿನಗಳಲ್ಲಿ ತನ್ನ ತಂದೆಯ ಶಸ್ತ್ರಚಿಕಿತ್ಸೆಗೆ ಹಣಬೇಕು ಎಂದು 1 ಲಕ್ಷ ಹಣವನ್ನು ಪಿರ್ಯಾದಿದಾರರಿಂದ ಪಡೆದುಕೊಂಡು, ಸದ್ರಿ ಹಣವನ್ನು 2 ತಿಂಗಳಲ್ಲಿ ಕೊಡುತ್ತೇನೆಂದು ಹೇಳಿ, ನಂತರ ಪಿರ್ಯಾದಿದಾರರು ಆರೋಪಿಯಲ್ಲಿ ಹಣ ಕೇಳಿದಾಗ ಆರೋಪಿಯು ಹಣ ಕೊಡದೇ ಸತಾಯಿಸುತ್ತಿದ್ದು, ದಿನಾಂಕ 20-11-2019ರಂದು ಹಣ ಕೊಡುವುದಾಗಿ ಹೇಳಿ ಪಿರ್ಯಾದಿದಾರರನ್ನು ತನ್ನ ಮನೆಗೆ ಕರೆಸಿಕೊಂಡು ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದು, ನಂತರ ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದು ಇದರಿಂದ ಪಿರ್ಯಾದಿದಾರರು ಗರ್ಭಿಣಿ ಆಗಿದ್ದು, ನಂತರದ ದಿನಗಳಲ್ಲಿ ಆರೋಪಿಯು ಪಿರ್ಯಾದಿದಾರರನ್ನು ಮದುವೆಯಾಗಲು ಒಪ್ಪಿರುವುದಿಲ್ಲ. ನಂತರ ದಿನಾಂಕ: 4-8-2020ರಂದು ಪಿರ್ಯಾದಿದಾರರು ಒಂದು ಹೆಣ್ಣು ಮಗುವಿಗೆ ಜನ್ಮನೀಡಿರುವುದಾಗಿದೆ. ಇದರ ವಿರುದ್ಧ ಬಜ್ಜೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಬಟ್ಟೆ ಪೊಲೀಸರು ಆರೋಪಿ ಉಮೇಶ್ ಸಾಲ್ಯಾನ್ ವಿರುದ್ಧ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಅತ್ಯಾಚಾರ ಪ್ರಕರಣದಲ್ಲಿ  ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಶ್ರೀ ಕಾಂತರಾಜು ಎಸ್.ವಿ.ರವರು ಆರೋಪಿ ಉಮೇಶ್‌ ಸಾಲ್ಯಾನ್‌ರವರನ್ನು ಖುಲಾಸೆಗೊಳಿಸಿ ದಿನಾಂ: 29-8-2024ರಂದು ತೀರ್ಪು ನೀಡಿದ್ದಾರೆ.

ಆರೋಪಿಯ ಪರವಾಗಿ ಮಂಗಳೂರಿನ ಖ್ಯಾತ ವಕೀಲರಾದ ಬಿ. ಅರುಣ ಬಂಗೇರ ಮತ್ತು ರಿಹಾನ ಪರ್ವೀನ್ ರವರು ವಾದಿಸಿದ್ದರು.

 


Spread the love
Subscribe
Notify of

0 Comments
Inline Feedbacks
View all comments