ಅನಂತ್ ಕುಮಾರ್ ಹೆಗ್ಡೆ ಚಲಾವಣೆಯಲ್ಲಿಲ್ಲದ ನಾಣ್ಯ,  ಗಾಂಧೀಜಿಯವರ ಹೆಸರೆತ್ತುವ ಯೋಗ್ಯತೆಯು ಅವರಿಗಿಲ್ಲ — ಶೌವಾದ್ ಗೂನಡ್ಕ  

Spread the love

ಅನಂತ್ ಕುಮಾರ್ ಹೆಗ್ಡೆ ಚಲಾವಣೆಯಲ್ಲಿಲ್ಲದ ನಾಣ್ಯ,  ಗಾಂಧೀಜಿಯವರ ಹೆಸರೆತ್ತುವ ಯೋಗ್ಯತೆಯು ಅವರಿಗಿಲ್ಲ — ಶೌವಾದ್ ಗೂನಡ್ಕ  

ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪಾತ್ರವೇನಿಲ್ಲವೆಂದು ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗ್ಡೆಯವರು ಗಾಂಧೀಜಿಯವರ ಜೀವನ ಚರಿತ್ರೆಯನ್ನು ತಿಳಿಯಬೇಕಾದ ಅಗತ್ಯವಿದೆ, ಪ್ರಪಂಚದ ಎಲ್ಲಾ ರಾಷ್ಟ್ರಗಳು ಇಂದು ಗಾಂಧೀಜಿಯವರನ್ನು ಗೌರವದಿಂದ ಕಾಣುತ್ತಿದೆ ಆದರೆ ಗಾಂಧೀಜಿಯವರ ಹೋರಾಟದ ಫಲವಾಗಿ ಇಂದು ಸಂಸದರಾಗಿರುವ ಇಂತಹವರು ಗಾಂಧೀಜಿಯವರನ್ನೇ ಹೀಯಾಳಿಸಿ ಮಾತನಾಡಿರುವುದು ಖೇದಕರವೆಂದು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.

ಅನಂತ್ ಕುಮಾರ್ ಹೆಗ್ಡೆಯವರಿಗೆ ಬಿ.ಜೆ.ಪಿ.ಯಲ್ಲಿ ಯಾವುದೇ ಸ್ಥಾನಮಾನಗಳು ದೊರಕುತ್ತಿಲ್ಲ ಅವರು ಚಲಾವಣೆಯಲ್ಲಿಲ್ಲದ ನಾಣ್ಯದಂತೆ ಆಗಿದ್ದಾರೆ ಆದುದ್ದರಿಂದ ಗಾಂಧೀಜಿಯವರ ವಿರುದ್ಧವೇ ಮಾತನಾಡಿ ಬಿ.ಜೆ.ಪಿ.ಹೈಕಮಾಂಡ್ ಹಾಗೂ ಆರ್.ಎಸ್.ಎಸ್.ನ್ನು ಮೆಚ್ಚಿಸಲು ಹೊರಟಿದ್ದಾರೆ. ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಮಹಾತ್ಮ ಗಾಂಧೀಜಿಯವರ ಹೆಸರೆತ್ತುವ ಯೋಗ್ಯತೆಯು ಅನಂತ್ ಕುಮಾರ್ ಹೆಗ್ಡೆಯವರಿಗಿಲ್ಲ. ಇಂದು ಅನೇಕ ರಾಷ್ಟ್ರಗಳ ರಸ್ತೆಗಳಿಗೆ ಗಾಂಧೀಜಿಯವರ ಹೆಸರಿದೆ, ಹಲವು ರಾಷ್ಟ್ರಗಳಲ್ಲಿ ಗಾಂಧೀಜಿಯವರ ಪ್ರತಿಮೆಯಿದೆ, ಹಲವು ರಾಷ್ಟ್ರಗಳು ಗಾಂಧೀಜಿಯವರ ಅಹಿಂಸಾ ತತ್ವವನ್ನು ಪ್ರತಿಪಾದಿಸಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ ಆದರೆ ಗಾಂಧೀಜಿಯವರು ಹುಟ್ಟಿ ಬೆಳೆದ ನಾಡಿನಲ್ಲೇ ಅವರಿಗೆ ಸಿಗಬೇಕಾದಂತಹ ಗೌರವ ಸಿಗುತ್ತಿಲ್ಲ, ಇತಿಹಾಸವನ್ನು ತಿಳಿಯದೇ ಬಾಯಿಗೆ ಬಂದಂತೆ ಮಾತನಾಡುವ ಅನಂತ್ ಕುಮಾರ್ ಹೆಗ್ಡೆಯವರಂತಹ ಸಂಸದರು ನಮ್ಮ ದೇಶದ ಸಂಸತ್ತಿನಲ್ಲಿ ಕುಳಿತುಕೊಳ್ಳುವುದೇ ಭಾರತಕ್ಕೆ ಅಪಮಾನವೆಂದು ಶೌವಾದ್ ಗೂನಡ್ಕರವರು ಹೇಳಿದ್ದಾರೆ.


Spread the love