ಅನಧಿಕೃತ ಹುಕ್ಕಾ ಬಾರಿಗೆ ಪೊಲೀಸರ ದಾಳಿ; ಪ್ರಕರಣ ದಾಖಲು

Spread the love

ಅನಧಿಕೃತ ಹುಕ್ಕಾ ಬಾರಿಗೆ ಪೊಲೀಸರ ದಾಳಿ; ಪ್ರಕರಣ ದಾಖಲು

ಮಂಗಳೂರು: ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್ ಮೇಲೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ ಘಟನೆ ಭಾನುವಾರ ನಡೆದಿದೆ.

ಭಾನುವಾರದಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ದ್ವಾರಕಾ ಮಯೀ ಕಂಪೌಂಡ್ ಒಳಗೆ ಯಾವುದೇ ಪರವಾನಗಿ ಪಡೆಯದೇ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ “ಸ್ಮೋಕಿಂಗ್ ಹಟ್” ಹೆಸರಿನ ಹುಕ್ಕಾ ಬಾರ್ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ.

ಹುಕ್ಕಾ ಬಾರಿನ ಮಾಲೀಕ ಜೋಜೋ ಜೋಸೆಫ್ ಮತ್ತು ಮ್ಯಾನೇಜರ್ ಸಲೀಂ ಎಂಬುವವರು ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದು, ದಾಳಿ ಸಂದರ್ಭ ಜ್ಯಾರಿಯಲ್ಲಿರುವ “Specified Pictorial Health Warning” ಇಲ್ಲದೇ ಸಾರ್ವಜನಿಕರಿಗೆ ಹುಕ್ಕಾ ಫ್ಲೇವೆರ್ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಸಂಬಂಧ ಕಲಂ 7, 20(2) cigarettes and other Tobacco Products (COTPA)-2003 ರಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುಮಾರು 57 ಪ್ಯಾಕ್ ಸ್ಮೋಕ್ಕಿಂಗ್ ಹುಕ್ಕಾ ಫ್ಲೇವರ್ಗಳು, ಎಂಟು ಹುಕ್ಕಾ ಪಾಟ್ಗಳು, ಹದಿನೈದು ಹುಕ್ಕಾ ಪೈಪ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ರವರ ಸೂಚನೆಯಂತೆ ಪೊಲೀಸ್ ಉಪ ನಿರೀಕ್ಷಕರಾದ ಗುರಪ್ಪ ಕಾಂತಿ, ಪಿ.ಸಿ-386 ರಂಜಿತ್, ಪಿ.ಸಿ-561 ಪ್ರಶಾಂತ್, ಪಿ.ಸಿ 562 ದಿಲ್ಲೆಪ್ಪ, ಪಿ.ಸಿ 2412 ಅಕ್ಬರ್ ರವರು ದಾಳಿ ಮಾಡಿ ಪ್ರಕರಣ ದಾಖಲಿಸಿರುತ್ತಾರೆ.


Spread the love