ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಗ್ರಾಪಂ ಸಿಬ್ಬಂದಿ ಸಹಿತ ಮೂವರು ವಶಕ್ಕೆ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಗ್ರಾಪಂ ಸಿಬ್ಬಂದಿ ಸಹಿತ ಮೂವರು ವಶಕ್ಕೆ

ಬಂಟ್ವಾಳ: ವಿಟ್ಲದ ಅಪ್ರಾಪ್ತ ವಯಸ್ಸಿನ   ಬಾಲಕಿಯ ಸರಣಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ  ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಮುಡ್ನೂರು ಗ್ರಾಮ ಪಂಚಾಯತ್‌ನ ತೆರಿಗೆ ಸಂಗ್ರಹಕ ಕೃಷ್ಣ ನಾಯ್ಕ್ (38), ಆಟೊ ಚಾಲಕ ಧನುಷ್ ನಾಯ್ಕ್(23) ಹಾಗೂ ಸಂತ್ರಸ್ತೆಯ ಸಂಬಂಧಿಕ ಗಣೇಶ್ ಪೊಲೀಸರ ವಶದಲ್ಲಿರುವ ಆರೋಪಿಗಳು.

ವಿಟ್ಲ ಸಮೀಪದ ಮುಡ್ನೂರು ನಿವಾಸಿಯಾಗಿರುವ ಬಾಲಕಿಯ ಮೇಲೆ ಇಲ್ಲಿನ ನಿವಾಸಿ,  ಕೃಷ್ಣ ನಾಯ್ಕ್, ಆಟೋ ಚಾಲಕ ಧನುಷ್, ಸಂತ್ರಸ್ತೆಯ ದೊಡ್ಡಮ್ಮನ ಮಗ ಗಣೇಶ್, ಪವನ್ ಹಾಗೂ ಪುನೀತ್ ಎಂಬವರು ತನ್ನ ಅತ್ಯಾಚಾರ ಎಸಗಿರುವುದಾಗಿ ಸಂತ್ರಸೆ ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.