ಅಭಿಮಾನಿಗಳೊಂದಿಗೆ ಗಿಡ ನೆಟ್ಟು ಹುಟ್ಟು ಹಬ್ಬ ಆಚರಿಸಿಕೊಂಡ ಪ್ರಮೋದ್ ಮಧ್ವರಾಜ್

ಅಭಿಮಾನಿಗಳೊಂದಿಗೆ ಗಿಡ ನೆಟ್ಟು ಹುಟ್ಟು ಹಬ್ಬ ಆಚರಿಸಿಕೊಂಡ ಪ್ರಮೋದ್ ಮಧ್ವರಾಜ್

ಉಡುಪಿ: ಮಾಜಿ ಮೀನುಗಾರಿಕೆ, ಯುವಜನ ಹಾಗೂ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ತಮ್ಮ ನಿವಾಸದ ತೋಟದಲ್ಲಿ ಗಿಡ ನೀಡುವು ದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಹಸಿರು ಉಳಿಸಲು ಗಿಡ ಮರ ಬೆಳೆಸಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ವಿನೂತನ ರೀತಿಯಲ್ಲಿ ಹುಟ್ಟು ಹಬ್ಬವನ್ನ ಮಧ್ವರಾಜ್ ಅವರು ಮಾದರಿಯಾಗಿ ಆಚರಿಸಿಕೊಂಡರು.

ಈ ವೇಳೆ ಪ್ರಮೋದ್ ಅಭಿಮಾನಿಗಳಾದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿಘ್ನೇಶ್ ಕಿಣಿ, ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ, ಕಾಂಗ್ರೆಸ್ ಕಾರ್ಯಕರ್ತರಾದ ಸಂಜಯ್ ಆಚಾರ್ಯ, ನಬೀಲ್ ಉದ್ಯಾವರ ಹಾಗೂ ಇತರರು ಉಪಸ್ಥಿತರಿದ್ದರು.