ಅಮೂಲ್ಯ ಎನ್ ಕೌಂಟರ್ ಮಾಡಿದರೆ 10 ಲಕ್ಷ ಬಹುಮಾನ- ಹೊಸಪೇಟೆ ತಾಲೂಕಿನ ಶ್ರೀ ರಾಮಸೇನೆ ತಾಲೂಕು ಅಧ್ಯಕ್ಷ ಹೇಳಿಕೆ

Spread the love

 ಅಮೂಲ್ಯ ಎನ್ ಕೌಂಟರ್ ಮಾಡಿದರೆ 10 ಲಕ್ಷ ಬಹುಮಾನ- ಹೊಸಪೇಟೆ ತಾಲೂಕಿನ ಶ್ರೀ ರಾಮಸೇನೆ ತಾಲೂಕು ಅಧ್ಯಕ್ಷ ಹೇಳಿಕೆ

ಬಳ್ಳಾರಿ: “ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಅವರನ್ನು ಎನ್ ಕೌಂಟರ್ ಮಾಡಿದರೆ ಅವರಿಗೆ ನಾನು ಹತ್ತು ಲಕ್ಷ ಬಹುಮಾನ ಕೊಡುತ್ತೇನೆ” ಎಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಶ್ರೀ ರಾಮಸೇನೆ ತಾಲೂಕು ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.

ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ “ಪಾಕಿಸ್ತಾನ ಜಿಂದಾಬಾದ್’ ಎಂದು ಅಮೂಲ್ಯ ಎಂಬ ಯುವತಿ ಘೋಷಣೆ ಕೂಗಿದ್ದರು. ಈ ಘೋಷಣೆ ವಿರೋಧಿಸಿ ರಾಜ್ಯಾದ್ಯಂತ ವಿರೋಧವೂ ವ್ಯಕ್ತವಾಗಿತ್ತು.

ಬಳ್ಳಾರಿಯಲ್ಲಿ ಅಂದೇ ರಾತ್ರಿ ಎಬಿವಿಪಿ ಕೂಡ ಬೃಹತ್ ಪ್ರತಿಭಟನೆ ನಡೆಸಿತು. ಇಂದು ಕೂಡ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಮಾತನಾಡುವ ಭರದಲ್ಲಿ, ರಾಮಸೇನೆ ತಾಲೂಕು ಅಧ್ಯಕ್ಷ ಸಂಜೆಯ್ ಮರೊಡಿ, “ಅಮೂಲ್ಯ ಅವರನ್ನು ಎನ್ ಕೌಂಟರ್ ಮಾಡಿದರೆ ಅವರಿಗೆ ಹತ್ತು ಲಕ್ಷ ಬಹುಮಾನ ಕೊಡುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.


Spread the love