ಅಮೆರಿಕದಲ್ಲಿ ಭಾರತೀಯರ ಕೊಲೆ: ಮೋದಿ ಮೌನ ಪ್ರಶ್ನಿಸಿದ ಬಿಕೆ ಹರಿಪ್ರಸಾದ್

Spread the love

ಅಮೆರಿಕದಲ್ಲಿ ಭಾರತೀಯರ ಕೊಲೆ: ಮೋದಿ ಮೌನ ಪ್ರಶ್ನಿಸಿದ ಬಿಕೆ ಹರಿಪ್ರಸಾದ್

ಮಂಗಳೂರು.ಅಮೆರಿಕದಲ್ಲಿ ಇಬ್ಬರು ಭಾರತೀಯರ ಕೊಲೆಯಾಗಿದೆ. ಕೆಲವರ ಮೇಲೆ ಹಲ್ಲೆ ನಡೆದಿದೆ ಆದರೂ ಭಾರತದ ಪ್ರಧಾನ ಮಂತ್ರಿ ಮೋದಿಯವರು ಈ ಬಗ್ಗೆ ಯಾವೂದೇ ಪ್ರತಿಕ್ರಿಯೆ ನೀಡದೆ ಏಕೆ ಮೌನವಹಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ನಗರಸ ಸರ್ಕೀಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಭಯೋತ್ಫಾದನೆಯ ನಿಗ್ರಹದ ಬಗ್ಗೆ ಮಾತನಾಡುತ್ತಿದ್ದ ಮೋದಿಯವರು ಭಾರತದ ಗಡಿಭಾಗದ ಕಾಶ್ಮಿರದಲ್ಲಿ ನಮ್ಮ ಯೋಧರು ಪಾಕಿಸ್ತಾನಿ ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದರೂ ಯಾವೂದೇ ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ಕೇರಳದ ಮುಖ್ಯಮಂತ್ರಿ ‘ಪಿಣರಾಯಿ ವಿಜಯನ್‌ ರಾಜ್ಯವೊಂದರ ಚುನಾಯಿತ ಮುಖ್ಯಮಂತ್ರಿ. ಅವರು ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ ಎಂಬ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಸಂಘ ಪರಿವಾರ ಈ ಬಗೆಯ ವಿರೋಧವನ್ನು ವ್ಯಕ್ತಪಡಿಸಿವೆ ಎಂದು ಆರೋಪಿಸಿದರು.

ಪಿಣರಾಯಿ ಹತ್ಯೆಗೆ ರೂ. 1 ಕೋಟಿ ಬಹುಮಾನ ಘೋಷಿಸಿದ ಆರ್‌ಎಸ್‌ಎಸ್‌ ಮುಖಂಡನ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಮಧ್ಯ ಪ್ರದೇಶದ ಗೃಹ ಸಚಿವರ ಎದುರಿನಲ್ಲೇ ಪಿಣರಾಯಿ ಹತ್ಯೆಗೆ ಪ್ರಚೋದಿಸುವ ಹೇಳಿಕೆ ನೀಡಿದ್ದರೂ, ಬಿಜೆಪಿ ಸರ್ಕಾರ ಮೌನ ತಳೆದಿದೆ. ಮಾರ್ಚ್‌ 9ರಿಂದ ಆರಂಭವಾಗುವ ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷವು ಈ ವಿಷಯವನ್ನು ಪ್ರಸ್ತಾಪಿಸಲಿದೆ. ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸಲಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ ಮುಖ್ಯ ಮಂತ್ರಿ ಆಗಮಿಸುವುದನ್ನು ವಿರೋಧಿಸಿದ ಸಂಘಪರಿವಾರದ ಪ್ರಯತ್ನದ ವಿರುದ್ಧ ಕರ್ನಾಟಕ ಸರಕಾರ ಸೂಕ್ತ ಕ್ರಮ ಕೈ ಗೊಂಡಿರುವುದು ಶ್ಲಾಘನೀಯ ದ.ಕ ಜಿಲ್ಲಾ ಪೊಲೀಸರನ್ನು ಅಭಿನಂದಿಸುವುದಾಗಿ ಹರಿಪ್ರಸಾದ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಚುನಾವಣೆಯ ಸಂದರ್ಭದಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಗಾಗಲೇ ಇಡೇರಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ.ಆದರೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಸರಕಾ ಮೂರು ವರ್ಷ ಪೂರೈಸುತ್ತಿರುವ ಹಂತದಲ್ಲಿ ವಿದೇಶದಿಂದ ಕಪ್ಪು ಹಣ ತರುತ್ತೇನೆ. ಭೃಷ್ಟಾಚಾರ ಕೊನೆಗೊಳಿಸುತ್ತೆನೆ ಎಂದು ಹಲವು ಭರವಸೆ ನೀಡಿದ್ದಾರೆ.ಯಾವ ಭರವಸೆಯನ್ನು ಈಡೇರಿಸಿರುವುದಿಲ್ಲ. ಅದನ್ನು ಮುಚ್ಚಿಹಾಕಲು ನೋಟು ಅಮಾನ್ಯ ಗೊಳಿಸುವ ತಂತ್ರ ನಡೆಸಿದ್ದಾರೆ. ಆದರೆ ಅದರಲ್ಲೂ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ದೇಶದಲ್ಲಿ ಮುಖ್ಯ ಮಂತ್ರಿಯಾಗಿ ಜೈಲು ಸೇರಿದ ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯ ಮಂತ್ರಿ ಯಾಗುವುದು ತಿರುಕನ ಕನಸು.ಯಡಿಯೂರಪ್ಪ ಕಂಪೆನಿಯೊಂದರಿಂದ 20 ಕೋಟಿ ರೂ ಹಣವನ್ನು ತನ್ನ ಖಾತೆಗೆ ಪಡೆದಿರುವ ಬಗ್ಗೆ ಆರೋಪವನ್ನು ಎದುರಿಸುತ್ತಿದ್ದಾರೆ.ಅದನ್ನು ಮರೆಮಾಚಲು ಸಿದ್ದರಾಮಯ್ಯರ ಮೇಲೆ ಡೈರಿ ವಿಷಯದಲ್ಲಿ ಆರೋಪ ಮಾಡುತ್ತಿದ್ದಾರೆ.ಡೈರಿ ಬಗ್ಗೆ ಆರೋಪ ಮಾಡುವುದಾದರೆ ಮೋದಿಯವರಿಗೆ 40 ಕೋಟಿ ರೂ ಲಂಚ ನೀಡಿದ ಆರೋಪದ ಬಗ್ಗೆಯೂ ತನಿಖೆಯಾಗಬೇಕಿತ್ತು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರು ಉತ್ತರ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ, ಎಐಸಿಸಿ ಸದಸ್ಯ ಪಿ.ವಿ.ಮೋಹನ್‌, ಮಂಗಳೂರು ದಕ್ಷಿಣ ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಾಲಿಕೆ ಸದಸ್ಯರಾದ ರಾಧಾಕೃಷ್ಣ, ಕವಿತಾ ಸನಿಲ್, ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್ ಸೊರಕೆ, ಸಂತೋಷ್‌ಕುಮಾರ್ ಶೆಟ್ಟಿ, ಟಿ.ಕೆ.ಸುಧೀರ್, ರುಕ್ಮಾನ್‌ ಇದ್ದರು.

 


Spread the love
1 Comment
Inline Feedbacks
View all comments
Truth Seeker
7 years ago

Who is this guy? And, why is he so clueless? Does he have anything to say about UCC, radical islam, attacks on Hindu in Bangladesh and Kashmiri pandits ?