ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಸೋದೆಯಿಂದ ಧವಳಗಂಗಾ ತೀರ್ಥ ಹಾಗೂ ಶ್ರೀ ಕ್ಷೇತ್ರದ ಮೃತ್ತಿಕೆ

Spread the love

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಸೋದೆಯಿಂದ ಧವಳಗಂಗಾ ತೀರ್ಥ ಹಾಗೂ ಶ್ರೀ ಕ್ಷೇತ್ರದ ಮೃತ್ತಿಕೆ

ಉಡುಪಿ: ಮರ್ಯಾದಾ ಪುರುಷೋತ್ತಮ ದಶರಥ ನಂದನ ಶ್ರೀರಾಮಚಂದ್ರನ ಜನ್ಮ ಸ್ಥಾನ ಶ್ರೀಕ್ಷೇತ್ರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕೆ ಶ್ರೀ ಕ್ಷೇತ್ರ ಸೋದೆಯಿಂದ ಧವಳಗಂಗಾ ತೀರ್ಥ ಹಾಗೂ ಶ್ರೀ ಕ್ಷೇತ್ರದ ಮೃತ್ತಿಕೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.

ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮೃತ್ತಿಕೆ ಹಾಗೂ ತೀರ್ಥಕ್ಕೆ ಪೂಜೆಯನ್ನು ಸಲ್ಲಿಸಿ ಶ್ರೀರಾಮಮಂದಿರದ ನಿರ್ಮಾಣವು ನಿರ್ವಿಘ್ನವಾಗಿ ಅತಿಶೀಘ್ರದಲ್ಲಿ ನೆರವೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಈ ವೇಳೆ ಭೀಮನ ಕಟ್ಟೆ ಮಠದ ಶ್ರೀ ರಘುವೇಂದ್ರ ತೀರ್ಥ ಸ್ವಾಮಿಜಿ ಉಪಸ್ಥಿತರಿದ್ದರು.


Spread the love