ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ

Spread the love

ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ

ಉಡುಪಿ: 42ನೇ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲೆವೂರು ಮತ್ತು ಕೊರಂಗ್ರಪಾಡಿ ಗ್ರಾಮಗಳನ್ನೊಳಗೊಂಡ ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣಾ ಪ್ರಕ್ರೀಯೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಇತರ ಪದಾಧಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎ.ನಟರಾಜ್ ರಾವ್ , ನಿರ್ದೇಶಕರುಗಳಾಗಿ ಉಮೇಶ್ ಕಾಮತ್, ನಾಗೇಶ್ ನಾಯಕ್, ಸ್ವಾತಿ ಜಿ.ಪ್ರಭು, ವಿದ್ಯಾ ದೇವೇಂದ್ರ ನಾಯಕ್, ಸುನಂದಾ ಶಂಕರ್ ಕೃಷ್ಣ ಅಸ್ಕೇಕರ್ , ಸಮರನಾಥಶೆಟ್ಟಿ, ನರಸಿಂಹ ಕಾಮತ್ ಆಯ್ಕೆಯಾಗಿದ್ದಾರೆ. ವಿಷಯ ಪರಿಣಿತ ನಿರ್ದೇಶಕರಾಗಿ ಸತೀಶ್ ಪೂಜಾರಿ, ಸುರೇಶ್ ನಾಯ್ಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಚುನಾವಣಾ ಅಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸಂಜಯ್. ಎಸ್ ಕಾರ್ಯ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಜನೀಶ್ ನಾಯಕ್ ಉಪಸ್ಥಿತರಿದ್ದರು.


Spread the love