ಅಲೋಶಿಯಸ್ ರಸ್ತೆ ಮರುನಾಮಕರಣಕ್ಕೆ ರಾಜ್ಯ ಸರಕಾರದ ತಡೆ

Spread the love

ಅಲೋಶಿಯಸ್ ರಸ್ತೆ ಮರುನಾಮಕರಣಕ್ಕೆ ರಾಜ್ಯ ಸರಕಾರದ ತಡೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಮಾರ್ಗದ ಕ್ಯಾಥೊಲಿಕ್ ಕ್ಲಬ್ ವರೆಗೆ ರಸ್ತೆಗೆ ಮುಲ್ಕಿ ಸುಂದರ್ ರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವ ಪ್ರಕ್ರಿಯೆಗೆ ಸರ್ಕಾರ ತಡೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಡಳಿತ ರಾಜ್ಯ ಸರಕಾರದ ಪತ್ರದ ಪ್ರಕಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೆಡ್ಕರ್ ವೃತ್ತದಿಂದ ಲೈಟ್ ಹೌಸ್ ವರೆಗೆ ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ ಎಂದು ಮರುನಾಮಕರಣ ಮಾಡುವುದಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ ಸದರಿ ರಸ್ತೆಯು ಈ ಹಿಂದೆ ಸಂತ ಅಲೋಶಿಯಸ್ ಕಾಲೇಜ್ ರಸ್ತೆ ಎಂದು ಹಲವಾರು ವರ್ಷಗಳಿಂದ ವಾಡಿಕೆಲ್ಲಿದೆ. ಸಂತ ಅಲೋಶಿಯಸ್ ಕಾಲೇಜು 137 ವರ್ಷಗಳಿಂದ ಮಂಗಳೂರು ನಗರದಲ್ಲಿ ಕ್ಯಾಥೊಲಿಕ್ ಧರ್ಮಗುರುಗಳ ಮುಖಾಂತರ ವಿದ್ಯಾ ಸೇವೆಯನ್ನು ಜಾತಿಭೇದವಿಲ್ಲದೆ ಮಾಡಿಕೊಂಡು ಬರುತ್ತಿದೆ, ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರಿಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರಿತಿಸಿಕೊಂಡಿದ್ದು ಈ ರಸ್ತೆಗೆ ಮರು ನಾಮಕರಣ ಮಾಡುವ ಮುನ್ನ ಸಾರ್ವಜನಿಕರ ಅಥವಾ ಕಾಲೇಜಿನ ಗಮನಕ್ಕೆ ಆಗಲಿ ಬಂದಿರುವುದಿಲ್ಲ. ಪ್ರಸ್ತುತ ಆದೇಶದಿಂದ ಬಹುತೇಕ ನಗರದ ಜನರಿಗೆ ನೋವುಂಟಾಗಿದೆ ಇದರಿಂದ ನಗರದಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು ವಿಜಯ ಬ್ಯಾಂಕ್ ನೌಕರರು ಸಂಘ ಆಯೋಜಿಸಲಾಗಿರುವ ಮರುನಾಮಕರಣ ಅದೇಶಕ್ಕೆ ತಡೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪರಿಹಾರ ಹುಡುಕಲು ಸೂಚಿಲಾಗಿದೆ.


Spread the love