ಅಶ್ಲೀಲ ವೀಡಿಯೊ ತೋರಿಸಿದ ಯುವಕನ ಬಂಧನ

ಅಶ್ಲೀಲ ವೀಡಿಯೊ ತೋರಿಸಿದ ಯುವಕನ ಬಂಧನ

ಮಂಗಳೂರು: ನಗರದ ಯೆಯ್ಯಾಡಿ ಶರ್ಬತ್‌ ಕಟ್ಟೆ ಬಳಿ ಬುಧವಾರ ಸಂಜೆ ಯುವತಿಗೆ ಅಶ್ಲೀಲ ವೀಡಿಯೊ ತೋರಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂದೂರ್‌ವೆಲ್ ನಿವಾಸಿ ಡೆವಿನ್ ಪಿಂಟೋ (29) ಬಂಧಿತ ಆರೋಪಿ.

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಈತ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊ ತೋರಿಸಿದ್ದು, ಈ ವೇಳೆ ಆಕೆ ಬೊಬ್ಬೆ ಹೊಡೆದಿದ್ದಾಳೆ. ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.