ಅಸೈಗೋಳಿ ಬಳಿ ಬೈಕ್ ಮತ್ತು ಬಸ್ಸಿನ ನಡುವೆ ಅಪಘಾತ- ಯುವಕ ಸಾವು

ಅಸೈಗೋಳಿ ಬಳಿ ಬೈಕ್ ಮತ್ತು ಬಸ್ಸಿನ ನಡುವೆ ಅಪಘಾತ- ಯುವಕ ಸಾವು

ಕೊಣಾಜೆ : ಬಸ್ಸು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಸೈಗೋಳಿ ಸಮೀಪದ ತಿಬ್ಲೆಪದವು ಬಳಿ ಗುರುವಾರ ನಡೆದಿದೆ.

ಮೃತರನ್ನು ಪಜೀರ್ ನಿವಾಸಿ ಹರ್ಷಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಬಸ್ಸು ಡಿಕ್ಕಿಯಾದ ರಭಸದಲ್ಲಿ ಹರ್ಷಿತ್ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಣಾಜೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮಾಡಿತ್ತಿದ್ದಾರೆ.