ಅ.22 ರಂದು ನೀರಿನ ಅದಾಲತ್

Spread the love

ಅ.22 ರಂದು ನೀರಿನ ಅದಾಲತ್

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಳಕೆದಾರರಿಗೆ ಮಾಸಿಕ ನೀರಿನ ಶುಲ್ಕದ ಬಗ್ಗೆ ಬಿಲ್ ಜ್ಯಾರಿ ಮಾಡಲಾಗುತ್ತಿದೆ ಬಳಕೆದಾರರ ಸದ್ರಿ ಬಿಲ್ಲಿನಲ್ಲಿನ ನ್ಯೂನ್ಯತೆಗಳ ಬಗ್ಗೆ ಪಾಲಿಕೆಗೆ ದಿನಂಪ್ರತಿ ಹಲವಾರು ದೂರುಗಳು ಬರುತ್ತಿದ್ದು ಸಾರ್ವಜನಿಕರಿಗೆ ಉಂಟಾಗುವ ಈ ಅನಾನುಕೂಲತೆಯನ್ನು ಸರಿ ಪಡಿಸುವ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪೂಜ್ಯ ಮಹಾ ಪೌರರ ಅಧ್ಯಕ್ಷತೆಯಲ್ಲಿ ನೀರಿನ ಅದಾಲತ್ ನಡೆಸುವಂತೆ ತಿರ್ಮಾನಿಲಾಗಿದೆ.

ಅದರಂತೆ ನೀರಿನ ಬಿಲ್ಲಿನಲ್ಲಿರುವ ನ್ಯೂನ್ಯತೆಗಳನ್ನು ಬಳಕೆದಾರರು ಅರ್ಜಿ ಮೂಲಕ ಕಚೇರಿಗೆ ಸಲ್ಲಿಸುವಂತೆ ಕೋರಿದೆ. ಅದರಂತೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಗ್ರಾಹಕರ ಬಿಲ್ಲಿನಲ್ಲಿ ತಕರಾರು ಇದ್ದಲ್ಲಿ ಅಕ್ಟೋಬರ್ 22 ರಂದು ಬೆಳಿಗ್ಗೆ 10.30 ಕ್ಕೆ ಮಹಾನಗರಪಾಲಿಕೆ ಕಚೇರಿಯ ಎರಡನೇ ಮಹಡಿಯಲ್ಲಿರುವ ಸಮಿತಿ ಸಭಾಂಗಣದಲ್ಲಿ ನೀರಿನ ಅದಾಲತ್ ನಡೆಸಲು ನಿರ್ಧರಿಸಲಾಗಿದ್ದು ಬಳಕೆದಾರರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.


Spread the love