‘ಆಟಿಯಲ್ಲೊಂದು ಕೂಟ’

Spread the love

ಧರ್ಮಸ್ಥಳ: ಆಟಿಯಲ್ಲಿ ತುಳುನಾಡಿನ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಪ್ರಕೃತಿದತ್ತವಾದ ಪದಾರ್ಥಗಳಿಂದ ಸಿದ್ಧಪಡಿಸಿದ ಆಹಾರಗಳಆರೋಗಕ್ಕೆ ಉತ್ತಮವಾದವು ಎಂದು ಧರ್ಮಸ್ಥಳದ ಪ್ರಸಿದ್ಧ ನಾಟಿ ವೈದ್ಯರಾದ ’’ರತ್ನಮ್ಮ’’ ಹೇಳಿದರು.

ಅವರು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ರಾಜ್ಯ ಪ್ರಶಸ್ತಿ ವಿಜೇತ ಶ್ರೀಕ್ಷೇತ್ರ ಕನ್ಯಾಕುಮಾರಿ ಯುವತಿ ಮಂಡಲ(ರಿ) ಆಯೋಜಿಸಿದ್ದ ‘’ ಆಟಿಯಲ್ಲೊಂದು ಕೂಟ’’ ಉದ್ಘಾಟನೆ ಮಾಡಿ ಮಾತನಾಡಿದರು.

1

ಹಿಂದೆ ಆಟಿಯ ಕಾಲ ತುಂಬ ಕಷ್ಟದ ಕಾಲವಾಗಿದ್ದು ನಮ್ಮ ಹಿರಿಯರು ಪ್ರಕೃತಿಯ ಮಧ್ಯ ಬೆಳೆದು ಗೆಡ್ಡೆ-ಗೆಣಸು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.ಆದರೆ ಈಗ ದೇಹದ ವಿಟಮಿನ್ ಕೊರತೆ ನೀಗಿಸಲೆಂದು ಆಟಿಯ ಕಾಲದಲ್ಲಿ ‘’ ಮರಕೆಸು, ಕರಿಕೆಸು, ನೋರಟೆ ಕಾಯಿ, ಮೊದಲಾದ ಕಾಡಿನ ಮೂಲಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ನಿರ್ದೇಶಕ ನೀನಾಸಂ ಸದಾಶಿವ ಧರ್ಮಸ್ಥಳ ಇವರು ಮಾತನಾಡಿ ಆಟಿಯ ಕಾಲದಲ್ಲಿ ನಮ್ಮ ದೇಹಕ್ಕೆ ಗೆಡ್ಡೆಗೆಣಸು ಎಷ್ಟು ಅವಶ್ಯಕವೊ ಹಾಗೆ ಮನಸ್ಸಿಗೆ ಮನರಂಜನೆ ಅಷ್ಟೆ ಮುಖ್ಯ. ಆದ್ದರಿಂದ ಆಟಿಯ ಕಾಲದ ಒತ್ತಡ ರಹಿತ ಸಮಯವನ್ನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಿ ವೈಧ್ಯರಾದ ಶ್ರೀಮತಿ ರತ್ನಮ್ಮ ವಹಿಸಿದ್ದು ಶ್ರೀಕ್ಷೇತ್ರ ಕನ್ಯಾಕುಮಾರಿ ಯುವತಿ ಮಂಡಲದ ಮಾಜಿ ಕಾರ್ಯದರ್ಶಿಗಳಾದ ಭವಾನಿ , ಶ್ರೀಕ್ಷೇತ್ರ ಕನ್ಯಾಕುಮಾರಿ ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಮಂಜುಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕನ್ಯಾಕುಮಾರಿ ಯುವತಿ ಮಂಡಲದ 100ಕ್ಕೂ ಹೆಚು ಸದಸ್ಯರು ಭಾಗವಹಿಸಿದರು ಇದೇ ಸಂದರ್ಭದಲ್ಲಿ ಆಟಿಯಲ್ಲಿ ತಿನ್ನುವಂತಹ ವಿಶೇಷ ಖಾಧ್ಯಗಳ ಪ್ರದರ್ಶನ ಜರುಗಿತು.

ಕನ್ಯಾಕುಮಾರಿ ಯುವತಿ ಮಂಡಲ ಸದಸ್ಯರಾದ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ಭವಾನಿ ಸ್ವಾಗತಿಸಿದರು ದಿವ್ಯ ವಂದಿಸಿದರು.


Spread the love