ಆತ್ರಾಡಿಯಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಮೃತ್ಯು

Spread the love

ಆತ್ರಾಡಿಯಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಮೃತ್ಯು

ಹಿರಿಯಡ್ಕ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಫಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಆತ್ರಾಡಿಯ ಪರೀಕ ದೇವಸ್ಥಾನದ ಗೋಪುರ ಬಳಿ ಸೋಮವಾರ ನಡೆದಿದೆ.

ಮೃತರನ್ನು ಬೈಕ್ ಸವಾರ ಹೆರ್ಗ ನಿವಾಸಿ ಪ್ರಿತೇಶ್ ಎಸ್.ಶೆಟ್ಟಿ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಉದ್ಯಾವರ ಸಂಪಿಗೆ ನಗರದ ನಿಖಿತ್ (26) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ನಿಖಿತ್ ಅವರು ತನ್ನ ಸ್ನೇಹಿತ ಪ್ರಿತೇಶ್ ಎಸ್ ಶೆಟ್ಟಿ ಅವರು ರಾಯಲ್ ಎನ್ ಫೀಲ್ಡ್ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸಹ ಸವಾರನ್ನಾಗಿ ಕುಳಿತುಕೊಂಡು ಮಣಿಪಾಲ ಕಡೆಯಿಂದ ಆತ್ರಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಹಿರಿಯಡ್ಕ ಕಡೆಯಿಂದ ಆತ್ರಾಡಿ ಕಡೆಗೆ ಕೆಎ 19ಎಮ್ ಜಿ9036ನೇ ಕಾರಿನ ಚಾಲಕನು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಪರೀಕ ದೇವಸ್ಥಾನದ ಗೋಪುರದ ಬಳಿಯ ರಸ್ತೆಗೆ ಒಮ್ಮೆಲೆ ಬಲಕ್ಕೆ ತಿರುಗಿಸಿ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಪ್ರೀತೇಶ್ ನಿಗೆ ತಲೆಗೆ ಎದೆಗೆ ಎಡಕೈ ಹಾಗೂ ಎಡಕಾಲಿಗೆ ತೀವ್ರ ತರಹದ ಜಖಂ ಆಗಿದ್ದಲ್ಲದೇ ಪಿರ್ಯಾದಿದಾರರ ಎಡಕಾಲು ಮತ್ತು ಎಡಕಣ್ಣಿಗೆ ಸಾಧಾರಣ ಸ್ವರೂಪದ ರಕ್ತಗಾಯವಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಿದ್ದು ಪ್ರೀತೇಶ್ ಅವರು ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love