ಆರ್.ಜಿ.ಪಿ.ಆರ್.ಎಸ್ ಉಡುಪಿ ಜಿಲ್ಲಾ ಸಂಯೋಜಕರಾಗಿ ಆನಂದ ಪೂಜಾರಿ ಕೊಡೇರಿ ನೇಮಕ

Spread the love

ಆರ್.ಜಿ.ಪಿ.ಆರ್.ಎಸ್ ಉಡುಪಿ ಜಿಲ್ಲಾ ಸಂಯೋಜಕರಾಗಿ ಆನಂದ ಪೂಜಾರಿ ಕೊಡೇರಿ ನೇಮಕ

ಉಡುಪಿ: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕರಾಗಿ ಆನಂದ ಪೂಜಾರಿ ಕೊಡೇರಿ ಇವರನ್ನು ನೇಮಕ ಮಾಡಲಾಗಿದೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಯೋಜಕರಾದ ವಿಜಯ್ ಸಿಂಗ್ ಅವರು ಆನಂದ ಪೂಜಾರಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಮತ್ತು ಸಂಘಟನೆ ಧ್ಯೇಯೋದ್ಧೇಶ ಹಾಗೂ ಕಾರ್ಯಕ್ರಮಗಳನ್ನು ನಡೆಸಿ ಪಕ್ಷದ ಸಂಘಟನೆಯನ್ನು ಮಾಡುವಂತೆ ಸೂಚಿಸಿದ್ದಾರೆ.

2016 ರಿಂದಲೂ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಂಬದಕೋಣೆ ಜಿಲ್ಲಾ ಪಂಚಾಯತ ಕ್ಷೇತ್ರದ ಸಂಯೋಜಕರಾಗಿ, ಬೈಂದೂರು ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹ ಸಂಯೋಜಕರಾಗಿ ಸೇವೆ ಸಲ್ಲಿಸಿದ ಇವರು ಉಡುಪಿ ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹ ಸಂಯೋಜಕರಾಗಿ ಕೂಡ ಸೇವೆ ನೀಡಿರುವ ಇವರು ಕಿರೀಮಂಜೇಶ್ವರ ಗ್ರಾಮ ಪಂಚಾಯತ್ ಹಾಲಿ ಸದಸ್ಯರಾಗಿರುತ್ತಾರೆ.


Spread the love

Leave a Reply